ಗೃಹಲಕ್ಷ್ಮಿ ಸಹಕಾರ ಸಂಘ | 3 ಲಕ್ಷದವರೆಗೆ ಕಡಿಮೆ ಬಡ್ಡಿಗೆ ಸಾಲ

Gruhalakshmi Cooperative Society | ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗೃಹಲಕ್ಷ್ಮಿ ಯೋಜನೆಯು ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಅವರ ಮಾರ್ಗದರ್ಶನದಲ್ಲಿ ”ಗೃಹಲಕ್ಷ್ಮಿವಿವಿಧೋದ್ದೇಶ ಸಹಕಾರ ಸಂಘ” ಸ್ಥಾಪನೆಯಾಗಿದ್ದು,…

Gruhalakshmi Cooperative Society

Gruhalakshmi Cooperative Society | ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಗೃಹಲಕ್ಷ್ಮಿ ಯೋಜನೆಯು ಇದೀಗ ಮತ್ತೊಂದು ಹೆಜ್ಜೆ ಇಟ್ಟಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಅವರ ಮಾರ್ಗದರ್ಶನದಲ್ಲಿ ”ಗೃಹಲಕ್ಷ್ಮಿವಿವಿಧೋದ್ದೇಶ ಸಹಕಾರ ಸಂಘ” ಸ್ಥಾಪನೆಯಾಗಿದ್ದು, ಈ ಯೋಜನೆಯ ಫಲಾನುಭವಿಗಳೇ ಇದರ ಮಾಲೀಕರಾಗಲಿದ್ದಾರೆ. ಇದು ತಮ್ಮ ಹಣವನ್ನು ಹೂಡಿಕೆ ಮಾಡಿ, ಹೊಸ ಆದಾಯದ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಲಿದೆ.

₹3 ಲಕ್ಷದವರೆಗೆ ಕಡಿಮೆ ಬಡ್ಡಿಗೆ ಸಾಲ

ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳಲ್ಲಿ 18-36% ವಾರ್ಷಿಕ ಬಡ್ಡಿಯೊಂದಿಗೆ ಗರಿಷ್ಠ ₹3 ಲಕ್ಷದವರೆಗೆ ಸಾಲ ಸೌಲಭ್ಯ ಲಭ್ಯವಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ ಸಾಲದಲ್ಲಿ ಆದ್ಯತೆ ನೀಡಲಾಗುವುದು. ಕನಿಷ್ಠ ದಾಖಲೆಗಳೊಂದಿಗೆ ಸಾಲ ಮಂಜೂರಾಗಲಿದ್ದು, ಇದನ್ನು ಸಣ್ಣ ವ್ಯಾಪಾರ, ಉದ್ಯಮ ಶಿಕ್ಷಣ ಮತ್ತು ಆರೋಗ್ಯದ ಖರ್ಚುಗಳಿಗೆ ಬಳಸಬಹುದು. ಮಹಿಳಾ ಸ್ವ-ಸಹಾಯ ಗುಂಪುಗಳಿಗೂ ಈ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

1,250 .ರೂ ನೋಂದಣಿ ಶುಲ್ಕ

ಯೋಜನೆಗೆ ಗೃಹಲಕ್ಷ್ಮೀ ಫಲಾನುಭವಿಗಳ ಸದಸ್ಯತ್ವವನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಡಿಸುತ್ತಿದೆ. ಪ್ರತಿ ಸದಸ್ಯೆಗೆ 1,250 ರೂಪಾಯಿ ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಇದರಲ್ಲಿ 1,000 ರೂಪಾಯಿ ಠೇವಣಿ, 100 ರೂಪಾಯಿ ಪ್ರವೇಶ ಶುಲ್ಕ ಮತ್ತು 150 ರೂಪಾಯಿ ನೋಂದಣಿ ಶುಲ್ಕ ಸೇರಿದೆ. ಒಮ್ಮೆ 1,250 ರೂಪಾಯಿ ಪಾವತಿಸಿದರೆ, ಮಾಸಿಕ ಕಂತುಗಳಿರುವುದಿಲ್ಲ. ಸದಸ್ಯತ್ವಕ್ಕಾಗಿ ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆಯೂ ಚಿಂತನೆ ನಡೆದಿದೆ.

Vijayaprabha Mobile App free

ನ. 19ರಂದು ಚಾಲನೆ

ನವೆಂಬರ್ 19 ರಂದು ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗುವುದು.

ಸ೦ಘದ ಮೊದಲ ಶಾಖೆ ಬೆಂಗಳೂರಿನಲ್ಲಿ ಆರಂಭವಾಗಿ, ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಇದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸಂಘದ ಸದಸ್ಯರಾಗಿ ನೋಂದಣಿ ಮಾಡಿಕೊಂಡು ಷೇರುದಾರರಾಗಲು ಅವಕಾಶವಿದೆ.

ಭವಿಷ್ಯದ ಯೋಜನೆಗಳು

ರಾಜ್ಯದ ಎಲ್ಲ ತಾಲೂಕುಗಳಿಗೆ ಗೃಹಲಕ್ಷ್ಮಿ ಸಹಕಾರ ಸ೦ಘವನ್ನು ವಿಸ್ತರಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರ್ಕಾರ ಹೊಂದಿದೆ. ಈ ಯೋಜನೆಯಡಿ, ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯವನ್ನು ಇನ್ನಷ್ಟು ಸುಗಮಗೊಳಿಸಲಾಗುವುದು. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸದ್ಬಳಕೆ ಮಾಡಿಕೊ೦ಡು ಮಹಿಳೆಯರು ಸ್ವಂತ ಉದ್ಯಮಿಗಳಾಗಿ ಬೆಳೆಯಲು ಪ್ರೋತ್ಸಾಹ ನೀಡುವುದು ಈ ಸ೦ಘದ ಪ್ರಮುಖ ಧೈಯವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.