Gruha Lakshmi Scheme New Rules | ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕಿಂಗ್ ಸುದ್ದಿ: ಇನ್ಮುಂದೆ ವರ್ಷಕ್ಕೊಮ್ಮೆ ಈ ಕೆಲಸ ಮಾಡದಿದ್ರೆ ಹಣ ಬರೋದಿಲ್ಲ!

Gruha Lakshmi Scheme New Rules | ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣದ ದುರುಪಯೋಗವನ್ನು ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಮರಣ…

Karnataka Gruha Lakshmi Scheme New Rules 2026 - Life Certificate Mandatory to prevent money misuse - Deceased beneficiaries removal update

Gruha Lakshmi Scheme New Rules | ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣದ ದುರುಪಯೋಗವನ್ನು ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ. ಮರಣ ಹೊಂದಿದ ಫಲಾನುಭವಿಗಳ ಖಾತೆಗಳಿಗೂ ಹಣ ಜಮಾ ಆಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ, ಜೀವಿತ ಪ್ರಮಾಣಪತ್ರ (ಲೈಫ್ ಸರ್ಟಿಫಿಕೇಟ್‌) ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಗಂಭೀರ ಪರಿಶೀಲನೆ ನಡೆಯುತ್ತಿದೆ. ಈ ಯೋಜನೆಯಡಿ ಪ್ರತಿ ತಿಂಗಳು ಮನೆ ಯಜಮಾನಿಯ ಖಾತೆಗೆ 2,000 ರೂ. ಜಮಾ ಆಗುತ್ತದೆ.

ಇದನ್ನೂ ಓದಿ: Chandra Grahana 2026 | ಚಂದ್ರನ ಬಣ್ಣವೇ ಬದಲಾಗುವ ವಿಸ್ಮಯ! ಮಾರ್ಚ್ 3 ರಂದು ಸಂಭವಿಸಲಿರುವ ಗ್ರಹಣದ ಸಂಪೂರ್ಣ ಮಾಹಿತಿ

Gruha lakshmi scheme | ಫಲಾನುಭವಿಗಳಿಗೆ ಮಾತ್ರ ಹಣ ತಲುಪಬೇಕು

Karnataka Gruha Lakshmi Scheme New Rules 2026 - Life Certificate Mandatory to prevent money misuse - Deceased beneficiaries removal update
“ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್ – ಹಣ ದುರುಪಯೋಗ ತಡೆಯಲು ಜೀವಿತ ಪ್ರಮಾಣಪತ್ರ (Life Certificate) ಕಡ್ಡಾಯ – ಮೃತಪಟ್ಟವರ ಖಾತೆಗೂ ಜಮೆಯಾಗುತ್ತಿರುವ ಹಣಕ್ಕೆ ಬ್ರೇಕ್”

ಈ ಸ೦ಬ೦ಧ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ. ಯೋಜನೆಯ ನಿಜವಾದ ಫಲಾನುಭವಿಗಳಿಗೆ ಮಾತ್ರ ಹಣ ತಲುಪಬೇಕು ಹಾಗೂ ಸರ್ಕಾರದ ಹಣ ವ್ಯರ್ಥ ಆಗದಂತೆ ಕ್ರಮ ಕೈಗೊಳ್ಳಬೇಕು ಎ೦ದು ಹೇಳಿದ್ದಾರೆ.

Vijayaprabha Mobile App free

ಇದನ್ನೂ ಓದಿ: ಚಿಕನ್ ಪ್ರಿಯರೇ ಎಚ್ಚರ! ನೆರೆ ರಾಜ್ಯಗಳಲ್ಲಿ ಹಕ್ಕಿ ಜ್ವರದ ಅಬ್ಬರ – ಕರ್ನಾಟಕದ ಸ್ಥಿತಿ ಏನು?

Gruha Lakshmi Scheme New Rules: ಹಣದ ದುರುಪಯೋಗಕ್ಕೆ ಕಡಿವಾಣ

ಸರ್ಕಾರದ ಮಟ್ಟದಲ್ಲಿ ಈ ಪ್ರಸ್ತಾವನೆಗೆ ಸಕಾರಾತ್ಮಕ ಸ್ಪಂದನೆ ದೊರಕಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ನಿಯಮ ಜಾರಿಗೆ ಬಂದರೆ, ಯೋಜನೆಯ ಪಾರದರ್ಶಕತೆ ಹೆಚ್ಚುವುದರ ಜೊತೆಗೆ, ಹಣದ ದುರುಪಯೋಗಕ್ಕೂ ಕಡಿವಾಣ ಬೀಳಲಿದೆ ಎ೦ದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಪ್ರತಿಕ್ರಿಯೆ

ದಿನೇಶ್‌ ಗೂಳಿಗೌಡ ಅವರ ಮನವಿಯನ್ನು ಪುರಸ್ಕರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕ್‌ ಗಳಿಗೆ ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಹೇಗೆ ಕಡ್ಡಾಯವೋ, ಅದೇ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಗೂ ತರಲು ಉದ್ದೇಶಿಸಲಾಗಿದೆ ಎ೦ದು ತಿಳಿದುಬ೦ದಿದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳೇ ಗಮನಿಸಿ: KMF SHIMUL ನೇಮಕಾತಿ ದಿನಾಂಕ ವಿಸ್ತರಣೆ! ಫೆಬ್ರವರಿ 21 ರೊಳಗೆ ಅರ್ಜಿ ಹಾಕಿ

ಮೃತ ಪಟ್ಟವರ ಹೆಸರಿನಲ್ಲೂ ಹಣ ಜಮಾಮೃತ ಪಟ್ಟವರ ಹೆಸರಿನಲ್ಲೂ ಹಣ ಜಮಾ

ಗೃಹಲಕ್ಷ್ಮಿ ಯೋಜನೆಯಡಿ ಪ್ರಸ್ತುತ ಸುಮಾರು 1.24 ಕೋಟಿ ಫಲಾನುಭವಿಗಳು ನೋಂದಾಯಿತರಾಗಿದ್ದು, ಈ ಯೋಜನೆಗಾಗಿ ಸರ್ಕಾರ ಇದುವರೆಗೂ ₹57,300 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವೆಚ್ಚ ಮಾಡಿದೆ. ಆದರೆ, ಕೆಲ ಪ್ರಕರಣಗಳಲ್ಲಿ ಮರಣ ಹೊಂದಿರುವ ವ್ಯಕ್ತಿಗಳ ಹೆಸರಿನಲ್ಲೂ ಹಣ ಜಮಾ ಆಗುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಅಕ್ರಮವನ್ನು ತಡೆಹಿಡಿಯುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.

Gruha Lakshmi Scheme New Rules : ಹೊಸ ಕ್ರಮಗಳ ಜಾರಿ ಬಗ್ಗೆ ಚರ್ಚೆ

ಸರ್ಕಾರದ ಹಣ ದುರ್ಬಳಕೆ ತಡೆಯಲು ಮತ್ತು ಪಾರದರ್ಶಕತೆ ಹೆಚ್ಚಿಸಲು ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಅಂತ್ಯೋದಯ, ಬಿಪಿಎಲ್, ಎಪಿಎಲ್‌ ಪಡಿತರ ಚೀಟಿಗಳಲ್ಲಿ ಮಹಿಳಾ ಯಜಮಾನಿಗಳಿಗೆ ಮಾತ್ರ ಈ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಇದುವರೆಗೆ 1,24,12,543 ಮಹಿಳೆಯರಿಗೆ ₹57,300 ಕೋಟಿ ನೀಡಲಾಗಿದೆ. ಮರಣ ಹೊಂದಿದವರ ಹೆಸರುಗಳು ಫಲಾನುಭವಿಗಳ ಪಟ್ಟಿಯಲ್ಲಿ ಉಳಿದುಕೊಂಡರೆ, ಅವರ ಖಾತೆಗಳಿಗೆ ಹಣ ಜಮಾ ಆಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ತಿಂಗಳಿಗೆ ಫಿಕ್ಸ್ ಆದಾಯ ಬೇಕೇ? ಹಾಗಿದ್ರೆ ಈ ‘ಮಾಸಿಕ ಆದಾಯ ಯೋಜನೆ’ ಬೆಸ್ಟ್! ಮಿಸ್ ಮಾಡ್ಬೇಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply