ನಿಮ್ಮ ಹಣಕ್ಕೆ ಹೆಚ್ಚಿನ ಲಾಭ; ಇಲ್ಲಿವೆ 5 ಅದ್ಬುತ ಯೋಜನೆಗಳು!

ಕೈಯಲ್ಲಿ ಇರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ನಿಮಗೆ ಹಲವು ಆಯ್ಕೆಗಳಿವೆ. ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವವರು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹಾಕಬಹುದು. ಇಲ್ಲದಿದ್ದರೆ ನೀವು ಸಣ್ಣ ಉಳಿತಾಯ…

money vijayaprabha news

ಕೈಯಲ್ಲಿ ಇರುವ ಹಣವನ್ನು ಎಲ್ಲಿಯಾದರೂ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ನಿಮಗೆ ಹಲವು ಆಯ್ಕೆಗಳಿವೆ. ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವವರು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹಾಕಬಹುದು. ಇಲ್ಲದಿದ್ದರೆ ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣವನ್ನು ಉಳಿಸಬಹುದು.

ಹೆಚ್ಚಿನ ಜನರು ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಆದ್ದರಿಂದ ಹೆಚ್ಚಿನ ಆದಾಯವನ್ನು ನೀಡುವ ಟಾಪ್ 5 ಯೋಜನೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಈ ಯೋಜನೆಗೆ ಸೇರ್ಪಡೆಗೊಳ್ಳುವುದರಿಂದ ಉತ್ತಮ ಲಾಭ ಬರುತ್ತದೆ. ಇದು ಹಿರಿಯ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ. ಗರಿಷ್ಠ 15 ಲಕ್ಷ ರೂ. ವರೆಗೆ ಇನ್ವೆಸ್ಟ್ ಮಾಡಬಹುದು. ಮೂರು ತಿಂಗಳಿಗೊಮ್ಮೆ ನೀವು ಇನ್ವೆಸ್ಟ್ ಮಾಡಿದ ಹಣಕ್ಕೆ ಬಡ್ಡಿ ಪಡೆಯಬಹುದು . 7.4 ರಷ್ಟು ಬಡ್ಡಿ ಬರುತ್ತದೆ.ಈ ಯೋಜನೆಯ ಮುಕ್ತಾಯ ಅವಧಿ ಐದು ವರ್ಷಗಳು.

Vijayaprabha Mobile App free

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಕೂಡ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಹಣವನ್ನು ಸಹ ಹೂಡಿಕೆ ಮಾಡಬಹುದು. ಸ್ಥಿರವಾದ ಆದಾಯವನ್ನು ಪಡೆಯಲು ಬಯಸುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ ರೂ .1,000 ಹೂಡಿಕೆ ಮಾಡಿದರೆ ಸಾಕು. ಗರಿಷ್ಠ 4.5 ಲಕ್ಷ ರೂ. ಜಂಟಿ ಖಾತೆಯಲ್ಲಿ 9 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶವಿದೆ. ಪ್ರತಿ ತಿಂಗಳು ನಿಮ್ಮ ಖಾತೆಗೆ ಬಡ್ಡಿ ಹಣ ಬರುತ್ತದೆ.

ಈ ಎರಡು ಮಾತ್ರವಲ್ಲದೆ ಹಣವನ್ನು ಆರ್‌ಬಿಐ ಬಾಂಡ್‌ಗಳಲ್ಲೂ ಹೂಡಿಕೆ ಮಾಡಬಹುದು. ಯಾವುದೇ ಅಪಾಯವಿಲ್ಲ. ಇನ್ನು ಕಾರ್ಪೊರೇಟ್ ಸಂಸ್ಥೆಗಳು ನೀಡುವ ಠೇವಣಿ ಯೋಜನೆಗಳಲ್ಲಿ ನಿಮ್ಮ ಹಣವನ್ನು ಸಹ ನೀವು ಇನ್ವೆಸ್ಟ್ ಮಾಡಬಹುದು. ಬಜಾಜ್ ಫೈನಾನ್ಸ್‌ನಂತಹ ಕಂಪನಿಗಳು ಈ ಯೋಜನೆಗಳನ್ನು ನೀಡುತ್ತವೆ.

ಇನ್ನೂ ತೆರಿಗೆ ರಹಿತ ಬಾಂಡ್‌ಗಳು ಸಹ ಲಭ್ಯವಿದೆ. ಇವುಗಳಲ್ಲಿ ನೀವು ನೀವು ಹಣವನ್ನು ಹಾಕಿದರೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು ಹಲವಾರು ಕಂಪನಿಗಳು ಜಾರಿಗೊಳಿಸಿವೆ.

ಇದನ್ನು ಓದಿ: ಉಚಿತವಾಗಿ 50 ಲಕ್ಷ ರೂ. ಇನ್ಸ್ಯುರೆನ್ಸ್ ಪಡೆಯುವುದು ಹೇಗೆ? ಆಯ್ಕೆಗಳು ಇಲ್ಲಿವೆ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.