EPFO; ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 5 ಕೋಟಿ EPF ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. 2022-23ರಲ್ಲಿ ಇಪಿಎಫ್ ಗ್ರಾಹಕರಿಗೆ ನೀಡುವ ಬಡ್ಡಿ ದರ 5 ಬೇಸಿಸ್ ಪಾಯಿಂಟ್ (Basis point) ಹೆಚ್ಚಾಗಿದೆ. ಅಂದರೆ. ಶೇ.8.15ಕ್ಕೆ ಹೆಚ್ಚಿಸಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಶೇ.8.10ರಷ್ಟು ಬಡ್ಡಿ ನೀಡಲಾಗಿತ್ತು. ಈ ನಿರ್ಧಾರದಿಂದ 5 ಕೋಟಿಗೂ ಹೆಚ್ಚು ಗ್ರಾಹಕರಿಗೆ ಲಾಭವಾಗಲಿದೆ. ನೂತನ ಬಡ್ಡಿ ದರವನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.
ಇದನ್ನು ಓದಿ: ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್.. ಮೋದಿ ಸರ್ಕಾರ್ ಮಹತ್ವದ ನಿರ್ಧಾರ!
2019-20 ರಲ್ಲಿ, ಪಿಎಫ್ ಬಡ್ಡಿ ದರವು(PF interest rate) ಶೇಕಡಾ 8.50 ರಷ್ಟಿತ್ತು. ಇದು ಕನಿಷ್ಠ ಏಳು ವರ್ಷಗಳು. 2018-19 ರಲ್ಲಿ, ಪಿಎಫ್ ಬಡ್ಡಿ ದರವು ಶೇಕಡಾ 8.65 ರಷ್ಟಿತ್ತು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇಂದ್ರವು ಪಿಎಫ್ ಬಡ್ಡಿ ದರವನ್ನು ಕಡಿಮೆ ಮಾಡುತ್ತ ಬಂದಿದೆ. 8.65, 8.50, 8.10 ಇಗೆ ಕಡಿಮೆಯಾಗುತ್ತಲೇ ಇತ್ತು. ಈಗ ಮಾತ್ರ ಪಿಎಫ್ ಬಡ್ಡಿ ದರವನ್ನು ಹೆಚ್ಚಿಸಿದ್ದು, ಅದು ಕೂಡ ಕೇವಲ 5 ಬೇಸಿಸ್ ಪಾಯಿಂಟ್ ಮಾತ್ರ.
ಇದನ್ನು ಓದಿ: ಮೂರೇ ದಿನ ಬಾಕಿ: ನಿಮ್ಮ ಪ್ಯಾನ್, ಆಧಾರ್ ಲಿಂಕ್ ಮಾಡ್ಬೇಕಾ? ಆಧಾರ್ ಜೊತೆ ಪಾನ್ ಲಿಂಕ್ ಮಾಡುವ ಮುನ್ನ ಎಚ್ಚರ, ಎಚ್ಚರ!
ಆದರೆ, ಗಮನಿಸಬೇಕಾದ ಅಂಶವೆಂದರೆ, 2016-17ರಲ್ಲಿಯೂ ಸಹ, EPFO ತನ್ನ ಚಂದಾದಾರರಿಗೆ 8.65 ಪ್ರತಿಶತ ಬಡ್ಡಿಯನ್ನು ಪಾವತಿಸಿತ್ತು. ಆದರೆ ಅದು 2017-18 ರಲ್ಲಿ ಅದನ್ನು 8.55 ಪ್ರತಿಶತಕ್ಕೆ ಇಳಿಸಿತು. 2015-16ರಲ್ಲಿ ಶೇ.8.8ರಷ್ಟಿತ್ತು. ಅಂದರೆ, ಏಳು ವರ್ಷಗಳ ಅವಧಿಯಲ್ಲಿ ಪಿಎಫ್ ಬಡ್ಡಿ ದರ ಶೇ.0.65ಕ್ಕೆ ಇಳಿದಿದೆ.
ಇದನ್ನು ಓದಿ: ಗಮನಿಸಿ: ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ಅವಕಾಶ; ಇವರಿಗೆ ಮಾತ್ರ ಕಡ್ಡಾಯವಲ್ಲ..!