ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜೀವಹಾನಿ ಮತ್ತು ಆಸ್ತಿ-ಪಾಸ್ತಿ ಹಾನಿಗೆ ಒಳಗಾದವರಿಗೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ಮಳೆಯಿಂದ ಸಂತ್ರಸ್ತರಾದವರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಮಾನವ ಜೀವ ಹಾನಿಯಾದರೆ NDRFನಿಂದ 4 ಲಕ್ಷ ರೂ. ನೀಡಲಾಗುತ್ತಿದ್ದು, ರಾಜ್ಯ ಸರಕಾರದಿಂದ ಹೆಚ್ಚುವರಿ 1 ಲಕ್ಷ ರೂ. ಸೇರಿದಂತೆ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ಜೂ.1ರಿಂದ ಸೆ.30ರವರೆಗಿನ ಅವಧಿಗೆ ಈ ಪರಿಹಾರ ಸೌಲಭ್ಯ ಸಿಗಲಿದೆ.
ಇನ್ನು, ಮಳೆಯಿಂದ ಶೇ.75ರಷ್ಟು ಹಾನಿಯಾದರೆ ದುರಸ್ಥಿಗಾಗಿ 5 ಲಕ್ಷ ರೂ. ಅಂದರೆ NDRFನಿಂದ 95,100 ರೂ. ಹಾಗೂ ರಾಜ್ಯ ಸರಕಾರದಿಂದ 4,40,00 ಲಕ್ಷ ರೂ. ಒಟ್ಟಾರೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.