ರಾಜ್ಯದ ಏಳು ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರನ್ನು ಬೆಸ್ಕಾಂ ಎಂಡಿಯಾಗಿ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಮಾಡಲಾದ ಜಿಲ್ಲಾಧಿಕಾರಿಗಳ ವಿವರ
>ತುಳಸಿ ಮದ್ದಿದೇನಿ-ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ.
>ಪಿ.ರಾಜೇಂದ್ರ ಚೋಳನ್-ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಎಂಡಿ.
>ಸುಂದರೇಶ್ ಬಾಬು-ಕೊಪ್ಪಳ ಜಿಲ್ಲಾಧಿಕಾರಿ.
>ಮಹಾಂತೇಶ್ ಬೀಳಗಿ-ಬೆಸ್ಕಾಂ ಎಂಡಿ.
>ಕೆ.ಶ್ರೀನಿವಾಸ್-ಬೆಂಗಳೂರು ನಗರ ಜಿಲ್ಲಾಧಿಕಾರಿ.
>ಎನ್.ಎಂ.ನಾಗರಾಜ-ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ.
ರಾಹುಲ್ ರತ್ನಂ ಪಾಂಡೆ-ಜಿಎಂ ಅವರನ್ನು ಪುನರ್ವಸತಿ ಮತ್ತು ಭೂ ಸ್ವಾಧೀನ ವಿಭಾಗ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.





