ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗಿರುವ ಕಾರಣ ಅಡುಗೆ ಎಣ್ಣೆ ಬೆಲೆಯನ್ನು ಒಂದು ವಾರದೊಳಗೆ ಪ್ರತಿ ಲೀಟರ್‌ಗೆ 10 ರೂಪಾಯಿ ಇಳಿಸಲು ಸರ್ಕಾರ ಆದೇಶಿಸಿದೆ ಎಂದು ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ತಿಳಿಸಿದ್ದಾರೆ.
ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಯನ್ನು ಕಡಿಮೆ ಮಾಡುವ ಕುರಿತು ಚರ್ಚಿಸಲು ಆಹಾರ ಸಚಿವಾಲಯವು ಅಡುಗೆ ತೈಲ ಉದ್ಯಮ ಸಂಸ್ಥೆಗಳು ಮತ್ತು ತಯಾರಕರನ್ನು ಭೇಟಿ ಮಾಡಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆ ಮುಂದಿನ ವಾರದ ವೇಳೆಗೆ ರೂ.10ರಷ್ಟು ಇಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ಭರವಸೆ ನೀಡಲಾಗಿದೆ.
ಇನ್ನು, ಕಳೆದ ತಿಂಗಳಲ್ಲಿ ಲೀಟರ್ ಎಣ್ಣೆಯ ಮೇಲೆ 10 ರಿಂದ 15 ರೂ ನಷ್ಟು ಎಂ ಆರ್ ಪಿ ಯನ್ನು ತೈಲ ಕಂಪನಿಗಳು ತಗ್ಗಿಸಿದ್ದವು.