ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ಈಗ ಪ್ರತಿಯೊಂದು ಕುಟುಂಬಕ್ಕೂ ಅವಶ್ಯಕ. ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗಕ್ಕಾಗಿ ವಲಸೆ ಬಂದವರು ತಮ್ಮ ಮನೆಗಳನ್ನು ತೊರೆದು ನಗರಗಳಲ್ಲಿ ವಾಸಿಸುತ್ತಿರುತ್ತಾರೆ. ಎಲ್ಪಿಜಿ ಸಂಪರ್ಕವನ್ನು ಪಡೆಯಲು ಅವರಿಗೆ ಕಷ್ಟವಾಗಬಹುದು. ಸ್ಥಳೀಯ ವಿಳಾಸ ಪುರಾವೆಗಳೊಂದಿಗೆ ಸಂಪರ್ಕದ ತೆಗೆದುಕೊಳ್ಳಬಹುದಾಗಿದೆ. ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡವರಿಗೆ ಅಡ್ರಸ್ ಪ್ರುಫ್ ಕಷ್ಟ.
ಆದರೆ, ಇಂತವರಿಗೋಸ್ಕರ ಇಂಡೆನ್ ಗ್ಯಾಸ್ ಹೊಸ ಸೇವೆಗಳನ್ನು ತಂದಿದ್ದು, ಚೋಟು ಅಥವಾ ಎಫ್‌ಟಿಎಲ್ 5 ಕೆಜಿ ಸಿಲಿಂಡರ್‌ಗಳನ್ನು ತಂದಿದೆ. ವಲಸಿಗರಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಸುಲಭವಾಗಿ ನೀಡುವ ಉದ್ದೇಶದಿಂದ ಕಂಪನಿಯು ಈ ಸೇವೆಗಳನ್ನು ಪ್ರಾರಂಭಿಸಿದೆ.
ಸ್ಥಳೀಯ ವಿಳಾಸ ಪುರಾವೆ ಇಲ್ಲದೆ ಈ ಸಿಲಿಂಡರ್‌ಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಹತ್ತಿರದ ಪೆಟ್ರೋಲ್ ಬಂಕ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಸಿಲಿಂಡರ್‌ಗಳನ್ನು ಪಡೆಯಬಹುದು. ನೀವು ನೇರವಾಗಿ ಹೋಗಿ ಹಣ ಪಾವತಿಸಿ, ಈ ಎಲ್ಪಿಜಿ ಸಿಲಿಂಡರ್ ಅನ್ನು ಮನೆಗೆ ತೆಗೆದುಕೊಂಡು ಬರಬಹುದು. ಐಡಿ ಪ್ರೂಫ್ ತೋರಿಸಲು ಸಾಕು. 500 ರೂ ಕಟ್ಟಬೇಕು.
The perfect buddy for any foodie! Get the Chhotu 5KG FTL Cylinder at a convenience store or petrol pump near you. No pre-booking. No address proof required. For details, visit https://t.co/4GQBXNgNCi #IndianOil #ChhotuMeraSaathi#ChhotuMeraSaathi #IndianOil pic.twitter.com/YyUHg7Pv8Z
— Indian Oil Corp Ltd (@IndianOilcl) May 24, 2021