ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಬಳಕೆದಾರರಿಗೆ ಇಲ್ಲಿದೆ ಒಳ್ಳೆಸುದ್ದಿ. ಜನರು ನಗದು ಬದಲಿಗೆ ಫೋನ್ ಮೂಲಕ ಹೆಚ್ಚಿನ UPI ವಹಿವಾಟು ನಡೆಸುತ್ತಿರುವುದರಿಂದ ಇದಕ್ಕೆ ಶುಲ್ಕ ವಿಧಿಸಲು RBI ಸೇವಾ ಪಾಲುದಾರರ ಅಭಿಪ್ರಾಯ ಕೇಳಿತ್ತು. ಆದರೆ, ಇದಕ್ಕೆ ಕೇಂದ್ರ ಹಣಕಾಸು ಇಲಾಖೆ, ‘ಯಾವುದೇ ಶುಲ್ಕ ವಿಧಿಸುವ ಚಿಂತನೆ ಇಲ್ಲ’ ಎಂದು ಹೇಳುವ ಮೂಲಕ ಜನಸಾಮಾನ್ಯರಿಗೆ ರಿಲೀಫ್ ನೀಡಿದೆ
ಹೌದು, ಜನರು ನಗದು ಬದಲಿಗೆ ಫೋನ್ ಮೂಲಕ ಹೆಚ್ಚಿನ UPI ವಹಿವಾಟು ನಡೆಸುತ್ತಿರುವುದರಿಂದ ಇದಕ್ಕೆ ಶುಲ್ಕ ವಿಧಿಸಲು ಕೇಂದ್ರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಟ್ವೀಟ್‌ನಲ್ಲಿ UPI ಮೂಲಕ ನಡೆಸಲಾಗುವ ಪಾವತಿ ಮತ್ತು ವಹಿವಾಟುಗಳಿಗೆ ಶುಲ್ಕ ವಿಧಿಸುವ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ ತಿಂಗಳೊಂದರಲ್ಲೇ ಭಾರತದಲ್ಲಿ 600 ಕೋಟಿಗೂ ಹೆಚ್ಚು ಯುಪಿಐ ವಹಿವಾಟು ನಡೆದಿದ್ದು, ಕೆಲ ದಿನಗಳ ಹಿಂದೆ ಆರ್‌ಬಿಐ ಬಿಡುಗಡೆ ಮಾಡಿದ್ದ ಸಲಹಾ ಪತ್ರದಲ್ಲಿ ಗೂಗಲ್ ಪೇ, ಫೋನ್ ಪೇ,ಪೇಟಿಎಂ ಸೇರಿದಂತೆ ಹಲವು ಆನ್‌ಲೈನ್ ವ್ಯವಸ್ಥೆಗಳ ಮೂಲಕ ನಡೆಸುವ ವಹಿವಾಟಿಗೆ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಸಲಹೆಗಳನ್ನು ಕೇಳಿತ್ತು.