PF withdrawal | ಪಿಎಫ್‌ ಬಳಕೆದಾರರಿಗೆ ಶುಭ ಸುದ್ದಿ, ದೀಪಾವಳಿಗೂ ಮುನ್ನವೇ ಬಂಪ‌ರ್!

PF withdrawal । ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವ೦ತೆಯೇ, ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ನೌಕರರಿಗೆ ಶುಭ ಸುದ್ದಿ ನೀಡಲು ಸಜ್ಜಾಗಿದೆ. ನೌಕರರ ಭವಿಷ್ಯ ನಿಧಿ (EPF) ಹಣ ಹಿ೦ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ಹೊಸ…

PF withdrawal

PF withdrawal । ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವ೦ತೆಯೇ, ಕೇಂದ್ರ ಸರ್ಕಾರ ದೇಶದ ಲಕ್ಷಾಂತರ ನೌಕರರಿಗೆ ಶುಭ ಸುದ್ದಿ ನೀಡಲು ಸಜ್ಜಾಗಿದೆ. ನೌಕರರ ಭವಿಷ್ಯ ನಿಧಿ (EPF) ಹಣ ಹಿ೦ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ಹೊಸ ಯೋಜನೆ ಜಾರಿಗೆ ಬರಲಿದೆ.

ಹೊಸ ಯೋಜನೆ – EPFO 3.0

PF withdrawal

ಪ್ರಸ್ತುತ, ಮದುವೆ, ವೈದ್ಯಕೀಯ ಖರ್ಚು, ಮಕ್ಕಳ ಶಿಕ್ಷಣದಂತಹ ತುರ್ತು ಸಂದರ್ಭಗಳಲ್ಲಿ ಮಾತ್ರ EPF ಹಣವನ್ನು ಹಿಂಪಡೆಯುವ ಅವಕಾಶವಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಹಲವು ಹಂತಗಳಿರುವುದರಿಂದ ಉದ್ಯೋಗಿಗಳಿಗೆ ತೊಂದರೆ ಆಗುತ್ತಿತ್ತು. ಈ ಅಸೌಕರ್ಯಗಳನ್ನು ನಿವಾರಿಸಲು ‘EPFO 3.0’ ಎಂಬ ಹೆಸರಿನ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲು ಮುಂದಾಗಿದೆ.

Vijayaprabha Mobile App free

ATM ಮೂಲಕ ಪಿಎಫ್ ಹಣ ವಿತ್‌ಡ್ರಾ

ಈ ಯೋಜನೆಯ ಅತ್ಯಂತ ಪ್ರಮುಖ ಬದಲಾವಣೆ ಎ೦ದರೆ, ಇನ್ನು ಮು೦ದೆ ನೌಕರರು ತಮ್ಮ ಪಿಎಫ್‌ ಹಣವನ್ನು ನೇರವಾಗಿ ಎಟಿಎಂ ಮೂಲಕವೇ ಹಿಂಪಡೆಯಲು ಸಾಧ್ಯವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಬ್ಯಾಂಕ್‌ ಪ್ರಕ್ರಿಯೆಗಾಗಿ ಕಾಯುವ ಅವಶ್ಯಕತೆ ಇರೋದಿಲ್ಲ. ಆಧಾರ್ ಕಾರ್ಡ್ ಅಥವಾ ಪಿಎಫ್ ಖಾತೆಗೆ ಲಿಂಕ್ ಆಗಿರುವ ಫೋನ್ ನಂಬರ್ ಬಳಸಿ ನೇರವಾಗಿ ಎಟಿಎಂನಿಂದ ಹಣ ತೆಗೆಯಬಹುದಾಗಿದೆ.

ನೌಕರರಿಗೆ ದೊರೆಯುವ ಲಾಭ

ಈ ಹೊಸ ವ್ಯವಸ್ಥೆ ಜಾರಿಗೆ ಬ೦ದರೆ, ತುರ್ತು ಸಂದರ್ಭಗಳಲ್ಲಿ ತಕ್ಷಣ ಹಣ ಪಡೆಯಲು ಸಾಧ್ಯವಾಗುತ್ತದೆ. ಇದು ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ನೀಡುವುದಲ್ಲದೆ, ಪಿಎಫ್ ಹಣ ಬಳಸುವ ವಿಧಾನವನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.