ಜನತೆಗೆ ಗುಡ್​ ನ್ಯೂಸ್: ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ..!

ಆಯಿಲ್ ಮಾರ್ಕೆಟಿಂಗ್ ಕಂಪನಿಗಳು LPG ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲ್‌ಪಿಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಪರಿಣಾಮ 19…

Indane gas vijayaprabha

ಆಯಿಲ್ ಮಾರ್ಕೆಟಿಂಗ್ ಕಂಪನಿಗಳು LPG ಸಿಲಿಂಡರ್‌ಗಳ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲ್‌ಪಿಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ,

ಪರಿಣಾಮ 19 ಕೆ.ಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಇಂದಿನಿಂದ 25.50 ರೂ ಗಳಷ್ಟು ಇಳಿಕೆಯಾಗಿದ್ದು, ಪರಿಷ್ಕೃತ ತೈಲ ಬೆಲೆಯು ನಿನ್ನೆ ಮಧ್ಯ ರಾತ್ರಿಯಿಂದಲೇ ಜಾರಿಯಾಗಿದೆ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಸತತ ಆರನೇ ತಿಂಗಳು ಕಡಿಮೆ ಮಾಡಲಾಗಿದ್ದು, ಇದರ ಬೆಲೆ ಮೇ ತಿಂಗಳಲ್ಲಿ 2,354ರೂಗೆ ತಲುಪಿತು. ಆದರೆ ಅಂದಿನಿಂದ ನಿರಂತರವಾಗಿ ಕಡಿತಗೊಳಿಸಲಾಗಿದೆ.

ಈ ಮೂಲಕ ದೆಹಲಿಯಲ್ಲಿ ಎಲ್‌ಪಿಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 25 ರೂಪಾಯಿ 50ಪೈಸೆ ಇಳಿಕೆಯಾಗಿದ್ದು, 1859.50 ರೂ ಗೆ ಇಳಿದಿದೆ.ಇದಕ್ಕೂ ಮೊದಲು ದೆಹಲಿಯಲ್ಲಿ 1885 ರೂಪಾಯಿಯಾಗಿತ್ತು. ಕೋಲ್ಕತ್ತಾದಲ್ಲಿ 36.50 ರೂ, ಮುಂಬೈನಲ್ಲಿ 32.50ರೂ. ಹಾಗೂ ಚೆನ್ನೈನಲ್ಲಿ 35.50 ರೂಪಾಯಿ ಇಳಿಕೆ ಆಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.