ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಸಿಹಿ ಸುದ್ದಿ: ವಿಶೇಷ ರೈಲುಗಳ ಸಂಚಾರ

ಬೆಂಗಳೂರು: ಮೈಸೂರು-ದಾನಾಪುರ ಮತ್ತು ವಾಸ್ಕೋ-ಗಾಮಾ-ಪಾಟ್ನಾ ನಿಲ್ದಾಣಗಳ ನಡುವೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಮೈಸೂರು-ದಾನಾಪುರ ನಡುವೆ ಸಂಚರಿಸುವ ಒನ್ ಟ್ರಿಪ್ ವಿಶೇಷ…

ಬೆಂಗಳೂರು: ಮೈಸೂರು-ದಾನಾಪುರ ಮತ್ತು ವಾಸ್ಕೋ-ಗಾಮಾ-ಪಾಟ್ನಾ ನಿಲ್ದಾಣಗಳ ನಡುವೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಮೈಸೂರು-ದಾನಾಪುರ ನಡುವೆ ಸಂಚರಿಸುವ ಒನ್ ಟ್ರಿಪ್ ವಿಶೇಷ ರೈಲು (06211/06212) ರೈಲು ಸಂಖ್ಯೆ. 06211 ಮೈಸೂರು-ದಾನಾಪುರ ವಿಶೇಷ ಎಕ್ಸ್ಪ್ರೆಸ್ ಮಾರ್ಚ್ 11 ರಂದು ಬೆಳಿಗ್ಗೆ 10:05 ಕ್ಕೆ ಮೈಸೂರಿನಿಂದ ಹೊರಟು ಮಾರ್ಚ್ 13 ರಂದು ಸಂಜೆ 5:00 ಕ್ಕೆ ದಾನಾಪುರ ತಲುಪಲಿದೆ.  ಅದೇ ರೈಲು (06212) ದಾನಾಪುರದಿಂದ ಮಾರ್ಚ್ 16 ರಂದು ಬೆಳಿಗ್ಗೆ 01:05 ಕ್ಕೆ ಹೊರಟು ಮಾರ್ಚ್ 18 ರಂದು ಬೆಳಿಗ್ಗೆ 03:40 ಕ್ಕೆ ಮೈಸೂರಿಗೆ ತಲುಪಲಿದೆ.  

ಮಾರ್ಗಮಧ್ಯದಲ್ಲಿ ರೈಲು ಮಂಡ್ಯ, ಕೆ. ಎಸ್. ಆರ್. ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ದಾವಣಗೆರೆ, ಶ್ರೀಸಿದ್ಧಾರೂಢ ಸ್ವಾಮಿಜಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ಮನ್ಮಾಡ್, ಭೂಸಾವಲ್, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಪ್ರಯಾಗ್ ರಾಜ್ ಚಿಯೋಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್ ಮತ್ತು ಆರಾ ನಿಲ್ದಾಣಗಳಲ್ಲಿ ನಿಲ್ಲಲಿದೆ.

Vijayaprabha Mobile App free

ಈ ವಿಶೇಷ ರೈಲಿನಲ್ಲಿ 1 ಎಸಿ ಟು ಟೈರ್ ಕಮ್ ಎಸಿ ಥ್ರೀ ಟೈರ್, 3 ಎಸಿ ಥ್ರೀ ಟೈರ್, 13 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್/ಡಿ ಕೋಚ್ಗಳು ಸೇರಿದಂತೆ ಒಟ್ಟು 21 ಕೋಚ್ಗಳು ಇರಲಿವೆ.

ವಾಸ್ಕೋ ಡಿ ಗಾಮಾ-ಪಾಟ್ನಾ ನಡುವೆ ಒಂದು ಟ್ರಿಪ್ ವಿಶೇಷ ರೈಲು (07311/07312)

ರೈಲು ಸಂಖ್ಯೆ. 07311 ವಾಸ್ಕೋ ಡಿ ಗಾಮಾ-ಪಾಟ್ನಾ ವಿಶೇಷ ಎಕ್ಸ್ಪ್ರೆಸ್ ಮಾರ್ಚ್ 11 ರಂದು ಸಂಜೆ 4:00 ಗಂಟೆಗೆ ವಾಸ್ಕೋ ಡಿ ಗಾಮಾದಿಂದ ಹೊರಟು ಮಾರ್ಚ್ 13 ರಂದು ಬೆಳಿಗ್ಗೆ 10:30 ಕ್ಕೆ ಪಾಟ್ನಾ ತಲುಪುತ್ತದೆ.  ಅದೇ ರೈಲು (07312) ಮಾರ್ಚ್ 15 ರಂದು ಸಂಜೆ 5:40 ಕ್ಕೆ ಪಾಟ್ನಾದಿಂದ ಹೊರಟು ಮಾರ್ಚ್ 17 ರಂದು ಬೆಳಿಗ್ಗೆ 10:30 ಕ್ಕೆ ವಾಸ್ಕೋ ಡಿ ಗಾಮಾವನ್ನು ತಲುಪುತ್ತದೆ.

ಈ ರೈಲು ಮಡಗಾಂವ್, ತಿವಿಮ್, ಸಾವಂತ್ವಾಡಿ ರಸ್ತೆ, ರತ್ನಗಿರಿ, ಚಿಪ್ಲುನ್, ರೋಹಾ, ಪನ್ವೇಲ್, ಕಲ್ಯಾಣ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ್, ಕಟ್ನಿ, ಸತ್ನಾ, ಪ್ರಯಾಗ್ ರಾಜ್ ಚಿಯೋಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ ಮತ್ತು ದಾನಾಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.  ಈ ವಿಶೇಷ ರೈಲು 1 ಎಸಿ 2 ಶ್ರೇಣಿ, 5 ಎಸಿ 3 ಶ್ರೇಣಿ, 12 ಸ್ಲೀಪರ್ ಕ್ಲಾಸ್, 1 ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ ಮತ್ತು 1 ಎಸ್ಎಲ್ಆರ್/ಡಿ ಬೋಗಿಗಳನ್ನು ಒಳಗೊಂಡಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಥವಾ 139 ಕ್ಕೆ ಕರೆ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯವನ್ನು ಪರಿಶೀಲಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply