ನವದೆಹಲಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ಮೋಟಾರು ವಾಹನಗಳ ದಾಖಲಾತಿಗಳ ವ್ಯಾಲಿಡಿಟಿ ಅವಧಿಯನ್ನು 2021ರ ಜೂನ್ 30ರ ತನಕ ವಿಸ್ತರಿಸಿದೆ.
ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ಸೇರಿದಂತೆ ವಾಹನದ ದಾಖಲೆಗಳ ಮಾನ್ಯತೆ ಫೆಬ್ರವರಿ 1ಕ್ಕೆ ಮುಗಿಯಬೇಕಿತ್ತು. ಆದರೆ ಇದರ ವ್ಯಾಲಿಡಿಟಿ ಮಾನ್ಯತೆಯನ್ನು ಈ ತಿಂಗಳ ಅಂತ್ಯದವರೆಗೂ ವಿಸ್ತರಿಸಿತ್ತು.
ಆದರೆ ಮತ್ತೆ ಕರೋನ ಎರಡನೇ ಅಲೆ ಶುರುವಾಗಿದ್ದು,ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಸಲಹೆಯನ್ನು ರವಾನಿಸಿದ್ದು, ಜೂನ್ 30ರ ತನಕ ಮಾನ್ಯತೆಯನ್ನು ವಿಸ್ತರಿಸಲಾಗಿದೆ.
ಹೀಗಾಗಿ ಮೋಟಾರು ವಾಹನಗಳ ದಾಖಲಾತಿಗಳ ವ್ಯಾಲಿಡಿಟಿ, ವಾಹನ ಪರವಾನಗಿ ವ್ಯಾಲಿಡಿಟಿ ಮುಗಿದಿರುವ ವಾಹನ ಸವಾರರು, ವಾಹನ ಮಾಲೀಕರು ತುಸು ನಿರಾಳರಾಗಿದ್ದಾರೆ.




