ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಟೋಲ್ ಗೇಟ್ ಶುಲ್ಕಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಟೋಲ್ ಗೇಟ್‌ಗಳಲ್ಲಿ ಕ್ಯೂ ಸಾಲುಗಳು ಹೆಚ್ಚು ಉದ್ದವಾಗದಂತೆ ನೋಡಿಕೊಳ್ಳಲು ಕೇಂದ್ರವು ಹೊಸ ನಿಯಮಗಳನ್ನು ತರುತ್ತಿದ್ದು, ನೀವು ಟೋಲ್ ಪ್ಲಾಜಾಗಳಿಗೆ ಯಾವುದೇ ಸಮಯದಲ್ಲಿ ಭೇಟಿ ನೀಡಿದರು ವಾಹನಗಳ ಸಾಲು 100 ಮೀಟರ್ ಮೀರುವುದಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ) ಎನ್‌ಎಚ್‌ಎಐ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ತರುತ್ತಿದ್ದು, ಇದರಿಂದ ಟೋಲ್ ಪ್ಲಾಜಾಗಳಲ್ಲಿ ಪ್ರತಿ ವಾಹನಕ್ಕೆ 10 ಸೆಕೆಂಡುಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಹೊಸ ನಿಯಮಗಳ ಪ್ರಕಾರ, ಟೋಲ್ ಪ್ಲಾಜಾದಲ್ಲಿನ ವಾಹನಗಳ ಸಾಲು 100 ಮೀಟರ್‌ಗಿಂತ ಹೆಚ್ಚು ಉದ್ದವಾಗಿದ್ದರೆ, ಸಾಲಿನ ಮುಂದೆ ಇರುವ ವಾಹನಗಳು ಟೋಲ್ ಶುಲ್ಕವನ್ನು ಪಾವತಿಸದೆ ಹೊರಡಬಹುದು. ಈಗೆ ಸಾಲಿನ ಉದ್ದ 100 ಮೀಟರ್ ಗಿಂತ ಕಡಿಮೆ ಬರುವವರೆಗೂ ವಾಹನಗಳು ಶುಲ್ಕವನ್ನು ಪಾವತಿಸದೆ ಹೊರಡಬಹುದು.
ಇನ್ನು, ಫೆಬ್ರವರಿ ತಿಂಗಳಿನಿಂದ ಫಾಸ್ಟ್ಯಾಗ್ಸ್ ಕಡ್ಡಾಯ ನಿಯಮಗಳು ಜಾರಿಗೆ ಬಂದಿದ್ದು, ಈಗ ಎಲ್ಲರಿಗೂ ತಿಳಿದ ವಿಷಯ. ಇದರಿಂದ ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸದೆ ವಾಹನ ಚಾಲಕರು ತಕ್ಷಣ ಹೊರಡಲು ಅನುವು ಮಾಡಿಕೊಡುತ್ತದೆ. ಟೋಲ್ ಶುಲ್ಕವನ್ನು ಫಾಸ್ಟ್ಯಾಗ್‌ನಿಂದ ಕಡಿತಗೊಳಿಸಲಾಗುತ್ತದೆ. ಇದನ್ನು ಮತ್ತೆ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ .