ನೀವು ರಿಲಯನ್ಸ್ ಜಿಯೋ ಗ್ರಾಹಕರೇ? ನೀವು ಭಾರ್ತಿ ಏರ್‌ಟೆಲ್ ಸಿಮ್ ಕಾರ್ಡ್ ಬಳಸುತ್ತಿದ್ದೀರಾ? ಇವೆರಡೂ ಇಲ್ಲದಿದ್ದರೆ ವೊಡಾಫೋನ್ ಐಡಿಯಾ ಬಳಕೆದಾರರೇ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಟೆಲಿಕಾಂ ನಿಯಂತ್ರಕ ಟ್ರಾಯ್ ಇತ್ತೀಚೆಗೆ ಟೆಲಿಕಾಂ ಕಂಪನಿಗಳಿಗೆ ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಇದು ಮೊಬೈಲ್ ಫೋನ್ ಬಳಕೆದಾರರಿಗೆ ಅನುಕೂಲವಾಗಲಿಗೆ.
ಟ್ರಾಯ್ ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರ ಪ್ರಕಾರ ಟೆಲಿಕಾಂ ಕಂಪನಿಗಳು ಖಚಿತವಾಗಿ ಕೆಲವು ಪ್ಲ್ಯಾನ್ ಗಳನ್ನೂ ಗ್ರಾಹಕರಿಗೆ ನೀಡಬೇಕಾಗುತ್ತದೆ. 30 ದಿನಗಳ ವ್ಯಾಲಿಡಿಟಿ ಯೋಜನೆಗಳನ್ನು ಒದಗಿಸಬೇಕು. ಅಂದರೆ ಪ್ಲಾನ್ ವೋಚರ್, ವಿಶೇಷ ಸುಂಕದ ಚೀಟಿ ಮತ್ತು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಕಾಂಬೋ ವೋಚರ್ ಅನ್ನು ಗ್ರಾಹಕರಿಗೆ ಒದಗಿಸಬೇಕು. ಇದರಿಂದ ಗ್ರಾಹಕರು ಅನುಕೂಲವಾಗಲಿದೆ.
ಟೆಲಿಕಾಂ ಕಂಪನಿಗಳು ಪ್ರಸ್ತುತ 28 ದಿನಗಳ ವ್ಯಾಲಿಡಿಟಿ ಯೋಜನೆಗಳನ್ನು ನೀಡುತ್ತಿದ್ದು, ಇನ್ನು ಕಂಪನಿಗಳು ಕೇವಲ 24 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿವೆ. 30 ದಿನಗಳ ವ್ಯಾಲಿಡಿಟಿ ಯೋಜನೆಗಳು ಲಭ್ಯವಿಲ್ಲ ಎಂದು ಗಮನಿಸಬೇಕು. ಇಂತಹ ಸಂದರ್ಭದಲ್ಲಿ ಟ್ರಾಯ್ ಹೊಸ ಆದೇಶ ಹೊರಡಿಸಿರುವುದು ಗಮನಾರ್ಹ.
ಟೆಲಿಕಾಂ ಕಂಪನಿಗಳು ಇಂದು ತಿಂಗಳ ಪ್ಲ್ಯಾನ್ ಎಂದು ಕೇವಲ 28 ದಿನಗಳ ವ್ಯಾಲಿಡಿಟಿಯ ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿದ್ದು, ಟ್ರಾಯ್‌ಗೆ ದೂರುಗಳು ಹೋಗಿದ್ದವು. ನಂತರ ಟ್ರಾಯ್ ಈ ಕುರಿತು ಆದೇಶ ಹೊರಡಿಸಿದ್ದು, ಟೆಲಿಕಾಂ ಕಂಪನಿಗಳು 30 ದಿನಗಳ ವ್ಯಾಲಿಡಿಟಿಯೊಂದಿಗೆ ವಿವಿಧ ವಿಭಾಗಗಳಲ್ಲಿ ಕನಿಷ್ಠ ಒಂದು ರೀಚಾರ್ಜ್ ಯೋಜನೆಯನ್ನು ಹೊಂದಿರಬೇಕು ಎಂದು ತಿಳಿಸಿದೆ.
ಕಳೆದ ವರ್ಷದ ಕೊನೆಯಲ್ಲಿ ಟೆಲಿಕಾಂ ಕಂಪನಿಗಳು ಸುಂಕವನ್ನು ಹೆಚ್ಚಿಸಿದ್ದು ಎಲ್ಲರಿಗು ತಿಳಿದ ವಿಷಯ. ದಿನದಿಂದ ದಿನ ಬೆಲೆಗಳು ಏರುತ್ತಲೇ ಇದ್ದು, ಮೊಬೈಲ್ ರೀಚಾರ್ಜ್ ಬೆಲೆಗಳು ಶೇಕಡಾ 25 ರಷ್ಟು ಏರಿಕೆಯಾಗಿದೆ. ಇದು ಮೊಬೈಲ್ ಫೋನ್ ಬಳಕೆದಾರರ ಮೇಲೆ ತೀವ್ರ ಪರಿಣಾಮ ಬೀರಿದ್ದು, ಭವಿಷ್ಯದಲ್ಲಿ ಸುಂಕದ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.