ಮೋದಿ ಸರ್ಕಾರ ಮನೆ ಖರೀದಿದಾರರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಕೋವಿಡ್ 19 ರ ಸಮಯದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದ ತೆರಿಗೆದಾರರಿಗೆ ಕೇಂದ್ರ ಸರ್ಕಾರ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದ ಸ್ವಂತ ಮನೆ ಕನಸನ್ನು ನನಸಾಗಿಸಲು ಬಯಸುವವರಿಗೆ ನೆಮ್ಮದಿ ನೀಡುತ್ತಿದೆ.
ವಸತಿ ಹೂಡಿಕೆಗಳ ಮೇಲೆ ರೆಸಿಡೆನ್ಶಿಯಲ್ ಇನ್ವೆಸ್ಟ್ಮೆಂಟ್ ಮೇಲೆ ವಿನಾಯಿತಿ ಪಡೆಯಲು ಕೇಂದ್ರ ಸರ್ಕಾರ ಇತ್ತೀಚೆಗೆ ಹೆಚ್ಚಿನ ಸಮಯವನ್ನು ನೀಡಿದೆ. ಗಡುವು ಸಾಮಾನ್ಯವಾಗಿ ಜೂನ್ 30ಕ್ಕೆ ಮುಗಿಯಬೇಕಿತ್ತು, ಆದರೆ ಈಗ ಮೋದಿ ಸರ್ಕಾರ ಗಡುವನ್ನು ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಿದೆ
ಅಂದರೆ ಏಪ್ರಿಲ್ 1 ರಂದು ಅಥವಾ ನಂತರ ಮನೆ ಖರೀದಿಸುವವರಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಕುರಿತು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಗಡುವನ್ನು 3 ತಿಂಗಳು ವಿಸ್ತರಿಸಿದ್ದು, ಮನೆ ಖರೀದಿದಾರರಿಗೆ ಇದು ಅನುಕೂಲವಾಗಲಿದೆ ಎನ್ನಲಾಗಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಮತ್ತು 54 ಜಿಬಿ ಪ್ರಕಾರ, ನಿಮ್ಮ ಮನೆಯ ಆಸ್ತಿಯನ್ನು ನೀವು ಮಾರಾಟ ಮಾಡಿದರೆ, ಬಂಡವಾಳದ ಲಾಭದ ಮೇಲೆ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ, ನೀವು ಹೊಸ ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ಆಸ್ತಿಯ ಮಾರಾಟದಿಂದ ಬಂದ ಹಣವನ್ನು ಬಳಸಬೇಕಾಗುತ್ತದೆ.




