ಕೇಂದ್ರ ಸರ್ಕಾರ ನೌಕರರಿಗೆ ಮುಂದಿನ ದಿನಗಳಲ್ ಶುಭ ಸುದ್ದಿ ಹೇಳಲಿದ್ದಾರಾ ಪ್ರಧಾನಿ ಮೋದಿ? ಬರುತ್ತಿರುವ ವರದಿಗಳ ಪ್ರಕಾರ ಆಲೋಚಿಸಿದರೆ, ಉತ್ತರ ಹೌದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರವು ನೌಕರರಿಗೆ ಬಾಕಿ(arrears) ಪಾವತಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೌಕರರಿಗೆ ಬಾಕಿ (arrears) ಉಳಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ನೌಕರರಿಗೆ ಬಾಕಿ (arrears) ಇಲ್ಲ.
ಆದರೆ, ಮೋದಿ ಸರಕಾರವು ನೌಕರರಿಗೆ ಬಾಕಿ (arrears) ಪಾವತಿಸುವ ವಿಚಾರವನ್ನು ಪರಿಶೀಲಿಸುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಕೇಂದ್ರ ಸಚಿವ ಸಂಪುಟವು ನೌಕರರಿಗೆ ಬಾಕಿ ರೂಪದಲ್ಲಿ 2 ಲಕ್ಷ ರೂ ಪಾವತಿಸುವ ಬಗ್ಗೆ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಆದರೆ, ಇಂತಹ ವರದಿಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅಲ್ಲದೆ ಬಾಕಿ(arrears) ನೀಡುವುದಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಹಾಗಾಗಿ ಖಚಿತವಾಗಿ ಕೊಡುತ್ತಾರೆಯೇ ಎಂದು ಹೇಳಲು ಸಾಧ್ಯವಿಲ್ಲ.
ತುಟ್ಟಿಭತ್ಯೆಯನ್ನು (ಡಿಎ) ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಡಿಎ ಅನ್ನು ಜನವರಿಯಲ್ಲಿ ಒಮ್ಮೆ ಮತ್ತು ಜುಲೈನಲ್ಲಿ ಮತ್ತೊಮ್ಮೆ ಪರಿಷ್ಕರಿಸಲಾಗುತ್ತದೆ. ಆದರೆ ಈ ವರ್ಷದ ಜನವರಿಯಲ್ಲಿ ಯಾವುದೇ ಡಿಎ ಹೆಚ್ಚಳವಾಗಿಲ್ಲ. ಕೇಂದ್ರ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಉದ್ಯೋಗಿಗಳಿಗೆ ವಿಶೇಷವಾಗಿ ಸರ್ಕಾರಿ ನೌಕರರಿಗೆ ಡಿಎ ಬಹಳ ನಿರ್ಣಾಯಕ ವಿಷಯವಾಗಿದೆ ಎಂದು ಹೇಳಬಹುದು. ಪ್ರಸ್ತುತ ಕೇಂದ್ರ ಸರ್ಕಾರವು ನೌಕರರಿಗೆ ಶೇಕಡಾ 31 ರಷ್ಟು ಡಿಎ ನೀಡುತ್ತಿದೆ
ಕೇಂದ್ರ ಸರ್ಕಾರ ಈ ಹಿಂದೆ ಡಿಎ ಬಾಕಿ ಇರುವುದಿಲ್ಲ ಎಂದು ಹೇಳಿತ್ತು. ಆದರೆ, ನೌಕರರ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಬಾಕಿ ಹಣ ಪಾವತಿಸಲಿದೆ ಎಂದು ವರದಿಗಳು ತಿಳಿಸಿವೆ. ರಾಷ್ಟ್ರೀಯ ಮಂಡಳಿ ಜೆಸಿಎಂ ಶಿವ ಗೋಪಾಲ್ ಮಿಶ್ರಾ ಅವರು ಈ ಹಿಂದೆ ಲೆವೆಲ್ 1 ಉದ್ಯೋಗಿಗಳಿಗೆ ಡಿಎ ಬಾಕಿ 11,880 ರಿಂದ 37,554 ರೂ. ವರೆಗೆ ಬರಬಹುದು ಎಂದು ಹೇಳಿದ್ದರು.
ಹಂತ 13, 7 ನೇ ವೇತನ ಆಯೋಗದ ಮೂಲ ವೇತನ ಶ್ರೇಣಿ (ರೂ. 1,23,100 ರಿಂದ ರೂ. 2,15,90) ಮತ್ತು ಹಂತ 14 (ಪೇ ಸ್ಕೇಲ್) ನೌಕರರು ಕ್ರಮವಾಗಿ ರೂ. 1,44,220 ಮತ್ತು ರೂ. 2,18,200 ಡಿಎ ಬಾಕಿಗಳನ್ನು ಪಡೆಯಬಹುದಾಗಿದೆ.




