ವಾರಣಾಸಿ: ಉತ್ತರ ಪ್ರದೇಶದ ವಾರಾಣಸಿ ನ್ಯಾಯಾಲಯವು ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಇರುವ ಶೃಂಗಾರ ಗೌರಿ & ಶಿವಲಿಂಗಕ್ಕೆ ಪೂಜೆ ಸಲ್ಲಿಕೆಗೆ ಅನುಮತಿ ನೀಡಿದ್ದು, ಅರ್ಜಿಯ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್, ಹಿಂದೂಗಳ ಅರ್ಜಿ ಪುರಸ್ಕರಿಸಿದ್ದಾರೆ.
ಹೌದು, ಮಸೀದಿ ಆವರಣದಲ್ಲಿ ಸಿಕ್ಕಿರುವ ಶೃಂಗಾರ ಗೌರಿ ಮತ್ತು ಶಿವಲಿಂಗಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಸೇರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ 3 ತಿಂಗಳ ಕಾಲ ವಾದ-ಪ್ರತಿವಾದ ನಡೆದಿತ್ತು ಪ್ರಕರಣ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ.
ʻಜ್ಞಾನವಾಪಿʼ ಎಲ್ಲಿದೆ?..ವಿವಾದವೇನು?
ಜ್ಞಾನವಾಪಿ ಮಸೀದಿ ಉತ್ತರ ಪ್ರದೇಶದ ವಾರಾಣಸಿಯಲ್ಲಿದೆ. ಇದನ್ನು 1669ರಲ್ಲಿ ಮೊಘಲ ದೊರೆ ಔರಂಗಜೇಬ ಕೆಡವಿದ ಶಿವ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.
ಈ ಮಸೀದಿ ಕಾಶಿ ವಿಶ್ವನಾಥ ದೇಗುಲದ ಭಾಗ ಎಂಬುದು ಹಿಂದೂಗಳ ವಾದ. ಇದರ ಹೊರ ಗೋಡೆಯಲ್ಲಿರುವ ಶೃಂಗಾರ ಗೌರಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಹಿಂದೂ ಮಹಿಳೆಯರು ಅರ್ಜಿ ಹಾಕಿದ್ದರು. ಇದು ವಕ್ಫ್ ಆಸ್ತಿ ಎಂದು ವಾದಿಸಿದ್ದ ಅಂಜುಮನ್ ಇಂತೇಜಾಮಿಯಾ ಮಸ್ಜಿದ್ ಕಮಿಟಿ, ಹಿಂದೂಗಳ ಮನವಿಯ ಔಚಿತ್ಯ ಪ್ರಶ್ನಿಸಿತ್ತು.