ಜಿಯೋ ಸೆನ್ಸೇಷನ್: ಜಿಯೋದಿಂದ ಅತ್ಯಂತ ಕಡಿಮೆ ಬೆಲೆಗೆ 5G ಫೋನ್…?

ಮುಖೇಶ್ ಅಂಬಾನಿ ಮತ್ತೊಂದು ಸೆನ್ಸೇಷನ್ ಕ್ರಿಯೇಟ್ ಮಾಡಲು ಸಿದ್ಧರಾಗಿದ್ದಾರೆಯೇ? ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಮೊಬೈಲ್ ಫೋನ್ ತಯಾರಕರಿಗೆ ಝಲಕ್ ನೀಡಲು ಸಿದ್ಧರಾಗಿದ್ದಾರಾ? ಮೂಲಗಳ ಪ್ರಕಾರ, ಹೌದು ಎನ್ನುವ ಉತ್ತರ ಸಿಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್…

ಮುಖೇಶ್ ಅಂಬಾನಿ ಮತ್ತೊಂದು ಸೆನ್ಸೇಷನ್ ಕ್ರಿಯೇಟ್ ಮಾಡಲು ಸಿದ್ಧರಾಗಿದ್ದಾರೆಯೇ? ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಮೊಬೈಲ್ ಫೋನ್ ತಯಾರಕರಿಗೆ ಝಲಕ್ ನೀಡಲು ಸಿದ್ಧರಾಗಿದ್ದಾರಾ? ಮೂಲಗಳ ಪ್ರಕಾರ, ಹೌದು ಎನ್ನುವ ಉತ್ತರ ಸಿಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ 44 ನೇ ವಾರ್ಷಿಕ ಸಾಮಾನ್ಯ ಸಭೆ ಸಮಾವೇಶದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ.

ರಿಲಯನ್ಸ್ ಜಿಯೋ ಕಂಪನಿ ಗೂಗಲ್ ಸಹಭಾಗಿತ್ವದಲ್ಲಿ ಹೊಸ ಫೋನ್ ಅನ್ನು ತರುತ್ತಿದೆ ಎನ್ನಲಾಗಿದ್ದು, ಇದೆ 5 ಜಿ ಫೋನ್ ಆಗಿರಬಹುದು ಎಂಬ ಊಹಿಸಲಾಗಿದೆ. ಈ 5 ಜಿ ಫೋನ್‌ನ ಬೆಲೆ 2,500 ರೂ.ಗಿಂತ ಕಡಿಮೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದು ದೇಶದ ಅತ್ಯಂತ ಅಗ್ಗದ 5 ಜಿ ಫೋನ್ ಆಗಬಹುದು ಎನ್ನಲಾಗಿದೆ.

ದೇಶದ ಅಗ್ಗದ 5 ಜಿ ಫೋನ್‌ನ ಬೆಲೆ ಪ್ರಸ್ತುತ 13,999 ರೂ.ಇದೆ. ಜಿಯೋ 2,500ರೂ ಮೌಲ್ಯದ ಫೋನ್ ತಂದರೆ ಹೆಚ್ಚಿನ ಜನರು ಈ ಪ್ರಯೋಜನ ಪಡೆಯಲಿದ್ದಾರೆ. 5 ಜಿ ಫೋನ್ ಈ ವರ್ಷದ ಕೊನೆಯಲ್ಲಿ ಲಭ್ಯವಾಗಬಹುದು ಎನ್ನಲಾಗಿದ್ದು, ರಿಲಯನ್ಸ್ ಜಿಯೋ ಈಗಾಗಲೇ 5 ಜಿ ಪ್ರಯೋಗಗಳನ್ನು ನಡೆಸಿದೆ.

Vijayaprabha Mobile App free

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 5 ಜಿ ಫೋನ್ ಮತ್ತು 5 ಜಿ ಸೇವೆಗಳನ್ನು ಮಾತ್ರವಲ್ಲದೆ ಜಿಯೋ ಬುಕ್ ಲ್ಯಾಪ್‌ಟಾಪ್‌ಗಳನ್ನು ಸಹ ತರಬಹುದು ಎನ್ನಲಾಗಿದೆ. ಈ ಲ್ಯಾಪ್‌ಟಾಪ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಬಹುದು. ಆದರೆ ಈ ಲ್ಯಾಪ್ ಟಾಪ್ ದರ ಎಷ್ಟು ಎಂಬುದು ತಿಳಿದಿಲ್ಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.