ಹೊಸ ಎಲ್ ಪಿಜಿ ಗ್ಯಾಸ್ ಸಂಪರ್ಕ ಪಡೆಯುವುದು ಇಲ್ಲಿಯವರೆಗೂ ಸ್ವಲ್ಪ ಕಷ್ಟವಾಗಿತ್ತು. ಆದರೆ ಇದೀಗ ಆ ಚಿಂತೆಗಳೆಲ್ಲ ಮಾಯವಾಗಿವೆ. LPG ಸಂಪರ್ಕಕ್ಕಾಗಿ ಕೇವಲ ಒಂದು ಮಿಸ್ಡ್ ಕಾಲ್ ಕೊಟ್ರೆ ಸಾಕು. ಮಿಸ್ಡ್ ಕಾಲ್ ನೀಡಿದ ನಂತರ, ನೀವು ಸುಲಭವಾಗಿ LPG ಸಂಪರ್ಕವನ್ನು ಪಡೆಯಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಗ್ರಾಹಕರಿಗೆ ಮಿಸ್ಡ್ ಕಾಲ್ ಮೂಲಕ ಗ್ಯಾಸ್ ಸಂಪರ್ಕ ನೀಡುವುದಾಗಿ ಟ್ವೀಟ್ ಮಾಡಿದ್ದು,ಈ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಗ್ರಾಹಕರಿಗೆ ಕರೆ ನೀಡಿದೆ.
ಯಾವ ನಂಬರ್ ಗೆ ಮಿಸ್ಡ್ ಕಾಲ್..?
IOCL ಹಂಚಿಕೊಂಡ ಮಾಹಿತಿಯ ಪ್ರಕಾರ, ನೀವು ಗ್ಯಾಸ್ ಸಂಪರ್ಕವನ್ನು ಬಯಸಿದರೆ, ನೀವು 8454955555 ಗೆ ಮಿಸ್ಡ್ ಕಾಲ್ ಮಾಡಬೇಕಾಗುತ್ತದೆ. ನಂತರ ನಿಮ್ಮನ್ನು IOCL ಉದ್ಯೋಗಿಗಳು ಸಂಪರ್ಕಿಸುತ್ತಾರೆ. ವಿಳಾಸ ಪುರಾವೆಯ ಆಧಾರದ ಮೇಲೆ ನೀವು ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ಈ ಸಂಖ್ಯೆಯ ಮೂಲಕವೇ ಗ್ಯಾಸ್ ರೀಫಿಲ್ ಕೂಡ ಮಾಡಬಹುದು. ಇದಕ್ಕಾಗಿ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಈ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರಾದರೂ ಈಗಾಗಲೇ ಗ್ಯಾಸ್ ಸಂಪರ್ಕವನ್ನು ಹೊಂದಿದ್ದರೆ ಮತ್ತು ವಿಳಾಸವು ಒಂದೇ ಆಗಿದ್ದರೆ, ನೀವು ಗ್ಯಾಸ್ ಸಂಪರ್ಕಕ್ಕಾಗಿ ಗ್ಯಾಸ್ ಏಜೆನ್ಸಿಗೆ ಹೋಗಬೇಕಾಗುತ್ತದೆ. ಹಳೆಯ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರಿಗೆ ತೋರಿಸಿ ಪರಿಶೀಲಿಸಬೇಕು. ಆಗ ಮಾತ್ರ ಆ ವಿಳಾಸದಲ್ಲಿ ಗ್ಯಾಸ್ ಸಂಪರ್ಕ ಸಿಗುತ್ತದೆ.
LPG ಸಿಲಿಂಡರ್ ಅನ್ನು ಬುಕ್ ಮಾಡುವುದು ಹೇಗೆ?
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8454955555 ಗೆ ಮಿಸ್ಡ್ ಕಾಲ್ ಮಾಡಿ.
LPG ಸಿಲಿಂಡರ್‌ಗಳನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ರೀಫಿಲ್ ಮಾಡಬಹುದು.
ಇದನ್ನು ಇಂಡಿಯನ್ ಆಯಿಲ್ ಅಪ್ಲಿಕೇಶನ್ ಅಥವಾ https://cx.indianoil.in ಮೂಲಕ ಬುಕ್ ಮಾಡಬಹುದು.
ಗ್ರಾಹಕರು 7588888824 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ಸಿಲಿಂಡರ್ ಅನ್ನು ಭರ್ತಿ ಮಾಡಬಹುದು.
ಇವುಗಳಲ್ಲದೆ, 7718955555 ಗೆ SMS ಅಥವಾ IVRS ಕಳುಹಿಸುವ ಮೂಲಕವೂ ಬುಕ್ಕಿಂಗ್ ಮಾಡಬಹುದು.
ಸಿಲಿಂಡರ್‌ಗಳನ್ನು Amazon ಮತ್ತು Paytm ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು.