ನಿಮ್ಮ ಬಳಿ ಗ್ಯಾಸ್ ಸಿಲಿಂಡರ್ ಇದೆಯೇ? ಅದು ಖಾಲಿಯಾಗಿದೆಯಾ? ಈಗ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗಾಗಿ ಒಂದು ಆಫರ್ ಲಭ್ಯವಿದ್ದು, ಇದರ ಭಾಗವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ರಿಯಾಯಿತಿ ದೊರೆಯುತ್ತದೆ.
ಹೌದು, ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ರಿಯಾಯಿತಿ ನೀಡುತ್ತಿದೆ. ನೀವು ಪಾಕೆಟ್ಸ್ ಆಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ, ನೀವು 50 ರೂಪಾಯಿ ರಿಯಾಯಿತಿ ಪಡೆಯಬಹುದು. ಗ್ಯಾಸ್ ಸಿಲಿಂಡರ್ ಸೇರಿದಂತೆ ಇತರ ಬಿಲ್ಗಳ ಪಾವತಿಯಲ್ಲಿ 10 ಪ್ರತಿಶತ ರಿಯಾಯಿತಿ ಪಡೆಯಬಹುದಾಗಿದ್ದು, ಗರಿಷ್ಠ ರೂ .50 ಕ್ಯಾಶ್ಬ್ಯಾಕ್ ಬರುತ್ತದೆ.
ಆದರೆ, ಇಅದಕ್ಕಾಗಿ ಕನಿಷ್ಠ ರೂ .200 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟನ್ನು ಮಾಡಬೇಕಾಗಿದ್ದು, ಈ ಕೊಡುಗೆ ತಿಂಗಳಿಗೆ ಮೂರು ಬಿಲ್ಗಳ ಪಾವತಿಗೆ ಮಾತ್ರ ಅನ್ವಯಿಸುತ್ತದೆ. ಪಾಕೆಟ್ಸ್ ಆಪ್ಗೆ ಹೋದ ನಂತರ, ರೀಚಾರ್ಜ್ ಮತ್ತು ಪಾವತಿ ಬಿಲ್ಗಳು ಎಂಬ ವಿಭಾಗಕ್ಕೆ ಹೋಗಿ. ನಂತರ ಬಿಲ್ಲರ್ ತೆಗೆದುಕೊಂಡು ಬಿಲ್ ಪಾವತಿಸಿ.