ದೇಶದಲ್ಲಿ ಮತ್ತೆ ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ವೊಂದರ ಬೆಲೆ 50 ರೂಪಾಯಿ ಏರಿಕೆಯಾಗಿ 1053 ರೂ.ಗೆ ತಲುಪಿದೆ ಎಂದು ವರದಿಯಾಗಿದೆ.
ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಈ ತಿಂಗಳ 1ರಂದು ವಾಣಿಜ್ಯ ಸಿಲಿಂಡರ್ ಬೆಲೆ 187 ರೂ. ಇಳಿಕೆಯಾಗಿತ್ತು.
ಒಂದು ‘ಮೊಟ್ಟೆ’ ಬೆಲೆ ಈಗ ಎಷ್ಟಾಗಿದೆ ಗೊತ್ತಾ?
ಇನ್ನು, ಕಳೆದ ಒಂದು ವಾರದಿಂದ ಕೋಳಿ ಮೊಟ್ಟೆ ಬೆಲೆಯಲ್ಲಿ ಕೂಡ 1.50 ರೂ. ಏರಿಕೆಯಾಗಿದ್ದು, ಕೋಳಿ ಸಾಕಾಣಿಕೆಗೆ ಅಗತ್ಯವಿರುವ ಸೋಯಾಬಿನ್, ಮೆಕ್ಕೆಜೋಳ, ಮತ್ತಿತರ ಆಹಾರ ಪದಾರ್ಥಗಳ ಬೆಲೆಯಲ್ಲಿ ಶೇ.10ರಿಂದ 15ರವರೆಗೆ ಹೆಚ್ಚಳವಾಗಿದ್ದು, ಇದರ ಪರಿಣಾಮ 5 ರೂ. ಇದ್ದ ಕೋಳಿ ಮೊಟ್ಟೆ ಬೆಲೆ ಈಗ 6.50 ರೂ. ಆಗಿದೆ.
ಪ್ರಸ್ತುತ ಸಗಟು ಮೊಟ್ಟೆ ಬೆಲೆ 4.35 ರೂ. ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 6.50 ರೂ.ಗೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮೊಟ್ಟೆ ಬಳಕೆ ಹೆಚ್ಚಾಗುತ್ತದೆ.