ಪಾಕ್ ವಿರುದ್ಧದ ಕ್ರಿಕೆಟ್ ಪಂದ್ಯವನ್ನು ಯಾವತ್ತೂ ವಿಶೇಷವಾಗಿ ನೋಡಿಲ್ಲ, ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸುತ್ತಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಈ ರೀತಿಯಾಗಿ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ ಅವರು, ನಾವು ಪಂದ್ಯವನ್ನು ಗೆಲ್ಲುವ ಬಗ್ಗೆ ಯೋಚಿಸುತ್ತಿದ್ದೆವು. ಸೋದರ ಸಂಬಂಧಿ ದೇಶದ ವಿರುದ್ಧದ ಪಂದ್ಯವನ್ನು ವಿಶೇಷವಾಗಿ ಕಂಡಿಲ್ಲ. ಮುಂಬರುವ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಗೆಲ್ಲುವ ಭರವಸೆ ಇದೆ ಎಂದಿದ್ದಾರೆ.
ಕೊಹ್ಲಿ ಏಷ್ಯಾಕಪ್‌ನಲ್ಲಿ ಶತಕ ಬಾರಿಸುತ್ತಾರೆ:
ಇನ್ನು, ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ತಮ್ಮ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ, ‘ವಿರಾಟ್ ಅಭ್ಯಾಸ ಮಾಡಲಿ, ಹೆಚ್ಚು ಪಂದ್ಯಗಳನ್ನು ಆಡಲಿ. ಅವರು ದೊಡ್ಡ ಆಟಗಾರ ಮತ್ತು ಸಾಕಷ್ಟು ರನ್ ಗಳಿಸಿದ್ದಾರೆ’ ಎಂದಿದ್ದಾರೆ.
ಇನ್ನು, ವಿರಾಟ್ ಉತ್ತಮವಾಗಿ ಆಡುತ್ತಿದ್ದಾರೆ, ಆದರೆ ಶತಕವನ್ನು ಗಳಿಸುತ್ತಿಲ್ಲ. ಆದರೆ, ಈ ಏಷ್ಯಾಕಪ್‌ನಲ್ಲಿ ಶತಕ ಬಾರಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.