ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ವಿಮೆ ಯೋಜನೆಯನ್ನು ಮಧ್ಯಮ ವರ್ಗದವರಿಗೂ ವಿಸ್ತರಿಸಲಾಗುವುದೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ಈ ಯೋಜನೆ ಅಡಿಯಲ್ಲಿ ಹೊಸ ಫಲಾನುಭವಿಗಳಿಗೆ ನಾಮಮಾತ್ರದ ಪ್ರೀಮಿಯಂನಲ್ಲಿ ನೀಡಲು ಯೋಜಿಸಿದೆ ಎಂದು ಹೇಳಿದೆ.
ದೇಶದಲ್ಲಿ ವಾರ್ಷಿಕ 10 ಲಕ್ಷ ಆದಾಯ ಗಳಿಸುವವರಿಗೂ, ವೈದ್ಯಕೀಯ ವೆಚ್ಚ ಭರಿಸುವುದು ಸುಲಭವಿರುವುದಿಲ್ಲ. ಹಾಗಾಗಿ ಫಲಾನುಭವಿಗಳ ಪಟ್ಟಿ ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಈ ಯೋಜನೆಯಡಿ, 10.74 ಕೋಟಿ BPL ಕುಟುಂಬಗಳು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿವೆ.
2018ರಲ್ಲಿ ಕಾರ್ಯರೂಪಕ್ಕೆ ಬಂದ ಯೋಜನೆಯಲ್ಲಿ ಇದೀಗ 10.74 ಕೋಟಿ ಕುಟುಂಬಗಳು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದು, ಪ್ರಸ್ತುತ, ದೇಶವ್ಯಾಪಿ 28,000 ಆಸ್ಪತ್ರೆಗಳು ಕೇಂದ್ರದ ಈ ಯೋಜನೆಯ ಭಾಗವಾಗಿವೆ ಎಂದು ತಿಳಿಸಿದೆ.