ನವದೆಹಲಿ: ಸರ್ಕಾರಿ ಸ್ವಾಮ್ಯದ BSNL (ಭಾರತೀಯ ಸಂಚಾರ ನಿಗಮ ಲಿಮಿಟೆಡ್) ಸಂಸ್ಥೆ ನೂತನವಾಗಿ ‘BSNL ಸಿನಿಮಾ ಪ್ಲಸ್’ ಎನ್ನುವ ವಿಶೇಷ OTT ಯೋಜನೆಯನ್ನು ಚಾಲ್ತಿಗೆ ತಂದಿದ್ದು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.
ಹೌದು ಇನ್ನು ಈ ಯೋಜನೆಯಲ್ಲಿ ಗ್ರಾಹಕರು ₹199 ಪಾವತಿಸಿದರೆ 3 ತಿಂಗಳ ವ್ಯಾಲಿಡಿಟಿ ಜೊತೆ ಜೀ5, ವೂಟ್, ಸೋನಿ ಲೈವ್ ಮತ್ತು ಯುಪ್ ಟಿವಿ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಬಳಸಬಹುದಾಗಿದೆ.
ಅಷ್ಟೇ ಅಲ್ಲದೆ ಜೊತೆಗೆ ಈ ಯೋಜನೆಯಿಂದ 300ಕ್ಕೂ ಅಧಿಕ ಟಿವಿ ವಾಹಿನಿಗಳು, 8 ಸಾವಿರಕ್ಕೂ ಅಧಿಕ ಸಿನಿಮಾಗಳು ಹಾಗೂ 80 ಲೈವ್ ಟಿವಿ ವಾಹಿನಿಗಳು BSNL ಗ್ರಾಹಕರಿಗೆ ಸಿಗಲಿದೆ ಎಂದು BSNL ಅಧಿಕಾರಿ ನಾಗೆಲ್ಲಾ ತ್ರಿನಾಥ್ ಅವರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.