ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ಕೇಂದ್ರ ಸರ್ಕಾರ ಒಂದು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಉಜ್ವಾಲಾ ಯೋಜನೆಯಡಿ ಅರ್ಹತೆ ಪಡೆದವರಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಒದಗಿಸುವುದಾಗಿ ಮೋದಿ ಸರ್ಕಾರ ಬಜೆಟ್ ಸಮಯದಲ್ಲಿ ಪ್ರಕಟಿಸಿದೆ.
ಉಜ್ವಾಲಾ ಯೋಜನೆಯಡಿ ನೀವು ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರೆ, ಕೇಂದ್ರ ಸರ್ಕಾರವು 1,600 ರೂ.ಗಳ ನೇರ ಸಹಾಯಧನವನ್ನು ನೀಡುತ್ತದೆ. ಅದೇ ರೀತಿ ತೈಲ ಮಾರುಕಟ್ಟೆ ಕಂಪನಿಗಳು ಸಹ 1,600 ರೂ. ನೀಡುತ್ತದೆ. ಇದರಿಂದ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ದೊರೆಯುತ್ತದೆ. ಆದರೆ, ಇಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ನೀಡುವ 1,600 ರೂಗಳನ್ನು ಇಎಂಐ ರೂಪದಲ್ಲಿ ಪಾವತಿಸಬೇಕಾಗುತ್ತದೆ.
ಬಿಪಿಎಲ್ ಕುಟುಂಬಕ್ಕೆ ಸೇರಿದ ಮಹಿಳೆಯರು ಉಜ್ವಾಲಾ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಹತ್ತಿರದ ಎಲ್‌ಪಿಜಿ ಕೇಂದ್ರಕ್ಕೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಬ್ಯಾಂಕ್ ಖಾತೆ ವಿವರಗಳನ್ನು ನೀಡುವುದು ಅಗತ್ಯವಾಗಿರುತ್ತದೆ.
ನೀವು 14.2 ಕೆಜಿ ಸಿಲಿಂಡರ್ ತೆಗೆದುಕೊಳ್ಳುತ್ತೀರಾ? ಅಥವಾ 5 ಕೆಜಿ ಸಿಲಿಂಡರ್ ತೆಗೆದುಕೊಳ್ಳುವುದೇ? ನಿಮ್ಮ ಆಯ್ಕೆಯಾಗಿದೆ. ಅದಕ್ಕೆ ಬಿಪಿಎಲ್ ಕಾರ್ಡ್, ಪಡಿತರ ಕಾರ್ಡ್ ಇರಬೇಕು. ಈ ಯೋಜನೆಯಡಿ ಅರ್ಜಿ ಸಲ್ಲಿಸುವವರು 18 ವರ್ಷ ವಯಸ್ಸಿನವರಾಗಿರಬೇಕು.