ಕೋವಿಡ್ ಸಮಯದಲ್ಲಿ ಜಾರಿ ಮಾಡಲಾಗಿದ್ದ ಗರೀಬ್ ಕಲ್ಯಾಣ ಯೋಜನೆಯ ಉಚಿತ ಆಹಾರ ಮತ್ತು ಧಾನ್ಯ ವಿತರಣೆ ಯೋಜನೆಯನ್ನು ಇನ್ನೂ 3 ತಿಂಗಳು ವಿಸ್ತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಹೌದು, ಈ ಬಗ್ಗೆ ಆಹಾರ ಸಚಿವಾಲಯ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಜನವರಿವರೆಗೂ ವಿಸ್ತರಿಸಲು ಮನವಿ ಮಾಡಲಾಗಿದೆ ಎನ್ನಲಾಗ್ತಿದೆ. ಇದಕ್ಕೂ ಮೊದಲು ಈ ಯೋಜನೆ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಯಾಗುವಂತೆ ಸೂಚಿಸಲಾಗಿತ್ತು. ಆದರೆ ಆಹಾರ ಸಚಿವಾಲಯ ಈ ಯೋಜನೆಯನ್ನು ಮುಂದುವರೆಸಲು ಆಸಕ್ತಿ ತೋರಿದ್ದು, ಕೇಂದ್ರವೂ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದೆ ಎನ್ನಲಾಗ್ತಿದೆ.
ಸರ್ಕಾರವು ಡಿಸೆಂಬರ್ ವರೆಗೆ 800 ಮಿಲಿಯನ್ ಜನರಿಗೆ ಉಚಿತ ಅಕ್ಕಿ ಅಥವಾ ಗೋಧಿ ನೀಡುವುದನ್ನು ಮುಂದುವರಿಸಬಹುದು. ಪ್ರಸ್ತುತ ಸೆಪ್ಟೆಂಬರ್ ಅಂತ್ಯಕ್ಕೆ ಈ ಯೋಜನೆ ಮುಕ್ತಾಯಗೊಳ್ಳಲಿದ್ದು, ಅಕ್ಟೋಬರ್ ನಲ್ಲಿ ಸರಣಿ ಹಬ್ಬಗಳು ಹಾಗೂ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಇರೋದ್ರಿಂದ ಈ ಯೋಜನೆ ವಿಸ್ತರಣೆ ಸಾಧ್ಯತೆ ಇದೆ.