ಬಿಜೆಪಿ ನಾಯಕರಿಗೆ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ; ಬಿಜೆಪಿಯಲ್ಲಿ ಅನೇಕ ಗುಂಪುಗಳಿವೆ: ಮಾಜಿ ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು: ಬಿಜೆಪಿ ನಾಯಕರಿಗೆ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ ಬಿಜೆಪಿಯಲ್ಲಿ ಅನೇಕ ಗುಂಪುಗಳಿವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ನಲ್ಲೂ ಗುಂಪುಗಳಿವೆ, ಆದರೆ ಬಿಜೆಪಿಯಷ್ಟು ಇಲ್ಲ. ಗುಂಪುಗಾರಿಕೆಯಿಂದ…

ramalinga reddy vijayaprabha news

ಬೆಂಗಳೂರು: ಬಿಜೆಪಿ ನಾಯಕರಿಗೆ ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗಲ್ಲ ಬಿಜೆಪಿಯಲ್ಲಿ ಅನೇಕ ಗುಂಪುಗಳಿವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಲ್ಲೂ ಗುಂಪುಗಳಿವೆ, ಆದರೆ ಬಿಜೆಪಿಯಷ್ಟು ಇಲ್ಲ. ಗುಂಪುಗಾರಿಕೆಯಿಂದ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿಲ್ಲ ಎಂದು ಬಿಜೆಪಿ ಮಿಷನ್-2020 ವಿರುದ್ಧ ಮಾಜಿ ಸಚಿವ ರಾಮಲಿಂಗ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ

ಮಿಷನ್-2020 ಮಾಡಿದ್ದಾರೆ, ಆದರೆ ಅದಕ್ಕೆ ಹಣ ಇಟ್ಟಿಲ್ಲ. ಬಿಜೆಪಿ ಈ ಹಿಂದೆ ಮನುವಾದ ಅನುಸರಣೆ ಮಾಡುತ್ತಿತ್ತು. ಈಗ ಬಿಜೆಪಿ ಮನಿ ವಾದ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ

Vijayaprabha Mobile App free

ಬಿ ಎಸ್ ಯಡಿಯೂರಪ್ಪ ಅವರಿಗೆ ಡಾಕ್ಟರೇಟ್ ಕೊಟ್ಟಿದ್ದು ಯಾರು? ಅವರೀಗ ಡಾಕ್ಟರ್ ಎಂದು ಹಾಕಿಸಿಕೊಳ್ಳೋದೇ ಬಿಟ್ಟಿದ್ದಾರೆ. ಟ್ರಂಪ್ ಸೋಲಲು ವೋಟ್ ಕೊಡಿಸಿದ್ದಕ್ಕೆ ಪ್ರಧಾನಿ ಮೋದಿಗೂ ಅಮೇರಿಕಾದ ಅವಾರ್ಡ್ ಕೊಟ್ಟಿದ್ದಾರೆ. ಬಿಜೆಪಿಯವರು ಎಂದರೆ ಡೋಂಗಿಗಳೆಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಲೇವಡಿ ಮಾಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.