ಲಖನೌ: ಮಹಿಳಾ ಶಿಕ್ಷಕಿಯನ್ನು ತನ್ನ ಸಹೋದ್ಯೋಗಿ ಶಾಲೆಯಲ್ಲಿ ಪಿಸ್ತೂಲಿನಿಂದ ಗುಂಡಿಕ್ಕಿ ಕೊಂದಿದರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ದೇಹದಿಂದ ಗುಂಡುಗಳು ಸೇರಿದ್ದರಿಂದ ಅವಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ. ಪಕರಿಯಾ ಮೂಲದ ಆರಾಧನಾ ರಾಯ್ (35) ಸರ್ಕಾರಿ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಳು. ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಕೌಶಲ್ ಆಕೆಗೆ ಬಂದೂಕಿನಿಂದ ಗುಂಡು ಹಾರಿಸಿ ಸಾಯಿಸಿದ್ದಾನೆ.
ಕ್ಯಾಶುಯಲ್ ಲಿವ್ (ರಜೆಗಳು) ರಿಜಿಸ್ಟರ್‌ನಲ್ಲಿ ನೋಂದಾಯಿಸುವ ವಿಚಾರದಲ್ಲಿ ಇಬ್ಬರ ನಡುವಿನ ವಾಗ್ವಾದವಾಗಿ ಕೋಪಗೊಂಡ ಅಮಿತ್ ಕೌಶಲ್ ಬಂದೂಕಿನಿಂದ ಗುಂಡಿಕ್ಕಿ ಆಕೆಯನ್ನು ಕೊಂದಿದ್ದಾನೆ. ಅಮಿತ್ ಕೌಶಲ್ ಆಕೆಯ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದರಿಂದ ಅವಳು ಸ್ಥಳದಲ್ಲೇ ಕುಸಿದುಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ್ದಾರೆ. ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಂತೆ ಕುತೂಹಲಕಾರಿ ಸಂಗತಿ ಬೆಳೆಕಿಗೆ ಬಂದಿದೆ.
ಮೃತ ಆರಾಧನಾ ರಾಯ್ ಮತ್ತು ಆರೋಪಿ ಅಮಿತ್ ಕೌಶಲ್ ನಡುವೆ ಪ್ರೇಮ ಸಂಬಂಧ ನಡೆದಿದೆ ಎಂದು ತಿಳಿದುಬಂದಿದೆ ಎಂದು ಸೀತಾಪುರ ಎಸ್ಪಿ ಆರ್ಪಿ ಸಿಂಗ್ ಹೇಳಿದ್ದಾರೆ. ಆದರೆ, ಪ್ರೇಮ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅಮಿತ್‌ನೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಆರಾಧನಾ ಶಾಲಾ ಪ್ರಾಧಿಕಾರಕ್ಕೂ ದೂರು ನೀಡಿದ್ದರು. ಆತನನ್ನು ವಿಚಾರಣೆ ನಡೆಸಿ ಶಾಲಾ ಪ್ರಾಧಿಕಾರವು ಅಮಿತ್‌ಗೆ ಎಚ್ಚರಿಕೆ ನೀಡಿತ್ತು ಎಂದು ತಿಳಿದುಬಂದಿದೆ. ಇಬ್ಬರ ನಡುವಿನ ಮತ್ತೆ ಜಗಳ ಉಂಟಾಗಿದ್ದು ಅಮಿತ್ ಕೌಶಲ್ ಗುಂಡಿಕ್ಕಿ ಶಿಕ್ಷಕಿ ಆರಾಧನಾ ರಾಯ್ ಅವರನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.