ಬೆಂಗಳೂರು: ಡಿಕೆಶಿ ಮೀರ್ ಸಾದಿಕ್ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಅವರು ” ಡಿಕೆಶಿ ಮೀರ್ ಸಾದಿಕ್ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಯಾರೆಂದು ನನಗೆ ಸಂಪೂರ್ಣ ಮಾಹಿತಿ ಇದೆ. ನಾನು ಆ ಸಂದರ್ಭದಲ್ಲಿ ಸಕ್ರಿಯನಾಗಿದ್ದೆ. ಡಿಸಿಎಂ ಅಶ್ವಥ್ ನಾರಾಯಣ್ ಈ ರೀತಿ ಮಾತನಾಡಬಾರದು. ನಮ್ಮವರು ಇಂತಹ ಪದ ಬಳಕೆ ಮಾಡಿದರೆ ಶೋಭೆ ತರಲ್ಲ ಎಂದು ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಐದಾರು ತಿಗಳಿಂದ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿದ್ರೆ ಕೈ ಗೆ ಲಾಭ. ದೇಶದ ಬಿಜೆಪಿಗೆ ಮೋದಿ ಹೇಗೋ , ಹಾಗೆ ಕರ್ನಾಟಕಕ್ಕೆ ಯಡಿಯೂರಪ್ಪ ಕೂಡ ಹಾಗೆ. ಯಡಿಯೂರಪ್ಪ ಅವರನ್ನು ಇಳಿಸಿದ್ರೆ ಬಿಜೆಪಿಗೆ 40 ಸೀಟ್ ಬರುತ್ತೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಗುಂಪುಗಾರಿಕೆ ಜಾಸ್ತಿ ಇದೆ. ಎಲ್ಲಾ ಪಕ್ಷಗಳಿಗೂ ಹೋಲಿಸಿದ್ರೆ ಬಿಜೆಪಿಯಲ್ಲಿ ಬಣ ರಾಜಕೀಯ ಹೆಚ್ಚು, ಅವರ ಕಿತ್ತಾಟಗಳೇ ಸರ್ಕಾರ ಹಾಗು ಪಕ್ಷಕ್ಕೆ ಮುಳುವಾಗುತ್ತೆ ಎಂದು ಬೆಂಗಳೂರಿನಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಜನರ ಕಷ್ಟಗಳ ಅರಿವಿದೆ : ಕುಸುಮ ಹನುಮಂತರಾಯಪ್ಪ