ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಕುಮಾರಸ್ವಾಮಿ ಅವರು, ನಾನು ಬಜೆಟ್ ಪ್ರತಿ ಓದಿದೆ, ಏನೂ ಅರ್ಥವಾಗುತ್ತಿಲ್ಲ. ನನ್ನ ಕಾಲದ ಟೆಂಡರ್ ಗಳನ್ನು ನಿಲ್ಲಿಸಿದ್ದಾರೆ. ನಾನು ಕೊಟ್ಟ ಹಣ ಡೈವರ್ಟ್ ಮಾಡಿದ್ದಾರೆ. ಕೋವಿಡ್ ಕೋವಿಡ್ ಎನ್ನುತ್ತಿದ್ದಾರೆ. ಹಣವನ್ನೆಲ್ಲಾ ಡೈವರ್ಟ್ ಮಾಡಿಕೊಂಡ ಮೇಲೆ ಬಜೆಟ್ ಯಾಕೆ? ನನ್ನ ಕಾಲದಲ್ಲಿ ಬಿಜೆಪಿ ಶಾಸಕರಿಗೂ ಅನುದಾನ ನೀಡಿದ್ದೆ. ಇಷ್ಟು ದಿನ ನಾನು ಮಾತನಾಡಿರಲಿಲ್ಲ. ನೆರೆಹಾವಳಿ, ಕೋವಿಡ್ ಎಂದು ಸರ್ಕಾರಕ್ಕೆ ಕಾಲಾವಕಾಶ ಕೊಟ್ಟಿದ್ದೆ. ಬಜೆಟ್ ನೋಡಿದ ಮೇಲೆ ಯಾವ ಪುರುಷಾರ್ಥಕ್ಕೆ ಅವಕಾಶ ಕೊಟ್ಟೆ ಎನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬಜೆಟ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ: ಹೆಚ್ಡಿಕೆ
ಇನ್ನು ರಾಜ್ಯ ಬಜೆಟ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಎಲ್ಲವನ್ನೂ ಮರ್ಜ್ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದು,ಬಜೆಟ್ ಪುಸ್ತಕದಲ್ಲಿ ಸರ್ವರಿಗೂ ಸಮಪಾಲು ಎಂದು ಮುದ್ರಿಸಿದ್ದಾರೆ. ಬಿಜೆಪಿ ಶಾಸಕರಿಗೇ ಸರಿಯಾಗಿ ಅನುದಾನ ನೀಡಿಲ್ಲ. ದಾರಿ ತಪ್ಪಿಸುವ ರೀತಿ ಹೇಳಿಕೊಂಡಿದ್ದಾರೆ. ಈ ಬಜೆಟ್ ಅನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಮಾಡಿದ್ದಾರೋ, ಯಾರು ಮಾಡಿದ್ದಾರೋ ಗೊತ್ತಿಲ್ಲ. ಈ ಬಾರಿ ನೀರಾವರಿ ಇಲಾಖೆಗೆ ಶೂನ್ಯ ಕೊಡುಗೆ ನೀಡಲಾಗಿದೆ ಎಂದು ಹೇಳಿದರು.




