ಅಕ್ರಮ BPL ಕಾರ್ಡ್ ದಾರರಿಗೆ ಬಿಗ್ ಶಾಕ್; 19,105 ಬಿಪಿಎಲ್ ಕಾರ್ಡ್ ರದ್ದು

ಬೆಂಗಳೂರು: ಅಕ್ರಮ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ಸರ್ಕಾರಿ ನೌಕರರು ಹೊಂದಿದ್ದ 19,105 ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿ ಎಪಿಎಲ್ ಗೆ ವರ್ಗಾಯಿಸಲಾಗಿದೆ…

bpl-ration-card-vijayaprabha-news

ಬೆಂಗಳೂರು: ಅಕ್ರಮ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ಸರ್ಕಾರಿ ನೌಕರರು ಹೊಂದಿದ್ದ 19,105 ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿ ಎಪಿಎಲ್ ಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಹೌದು, ರಾಜ್ಯ ಸರ್ಕಾರ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳ ಪತ್ತೆಗಾಗಿ ಕಂದಾಯ ಇಲಾಖೆಯ ಇ-ಜನ್ಮ ತಂತ್ರಾಂಶ ಬಳಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಸರ್ಕಾರಿ ನೌಕರರು ಹೊಂದಿದ್ದ 19,105 ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ಪತ್ತೆ ಹಚ್ಚಿದ್ದು, ನೌಕರರು ಹೊಂದಿದ್ದ 19,105 ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿ ಎಪಿಎಲ್ ಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದೆ

ಇನ್ನು, ರಾಜ್ಯದಲ್ಲಿ 2,354 ಸರ್ಕಾರಿ ನೌಕರರು ಅಂತ್ಯೋದಯ ಕಾರ್ಡ್, 16,751 ನೌಕರರು ಆದ್ಯತಾ ಪಡಿತರ ಚೀಟಿ (BPL Card) ಹೊಂದಿದ್ದರು. ಇವುಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು 1,240 ಸರ್ಕಾರಿ ನೌಕರರು ಅಕ್ರಮ ಕಾರ್ಡ್ ಗಳು ಹೊಂದಿದ್ದು ಪತ್ತೆಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ 1,068, ರಾಯಚೂರು ಜಿಲ್ಲೆಯಲ್ಲಿ 1,019, ತುಮಕೂರು ಜಿಲ್ಲೆಯಲ್ಲಿ 1,054 ಅಕ್ರಮ ಕಾರ್ಡ್ ಗಳು ಪತ್ತೆಯಾಗಿವೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.