Price hike: ಪ್ರತಿ ಬಾರಿ ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರಿಗೆ ದುಪಟ್ಟು ಹಣ ವಸೂಲಿ ಮಾಡುತ್ತವೆ. ಗೌರಿ, ಗಣೇಶ ಹಬ್ಬ ಹಿನ್ನಲೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಆದರೆ, ತರಕಾರಿ ದರಗಳ ಸಾಕಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ: ಮಹಿಳೆಯರಿಗೆ ಗುಡ್ ನ್ಯೂಸ್; ಉಚಿತ ಗ್ಯಾಸ್ ಸಿಲಿಂಡರ್, ಸ್ಟವ್ ಸೇರಿದಂತೆ ರೂ.400 ಸಬ್ಸಿಡಿ ಕೂಡ; ಅರ್ಜಿ ಸಲ್ಲಿಸುವುದು ಹೇಗೆ?
Price hike: ಹೂ, ಹಣ್ಣು ಬೆಲೆ ಏರಿಕೆ

ರಾಜ್ಯಾದ್ಯಂತ ಗಣೇಶ ಚತುರ್ಥಿ ಹಬ್ಬದ ವಸ್ತುಗಳ ಖರೀದಿಗೆ ಮುಂದಾದ ನಗರದ ಜನರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. ಅದರಂತೆ ಹೂಗಳ ದರ (ಕೆಜಿಗೆ) ಮಲ್ಲಿಗೆ ಹೂ ಕೆಜಿಗೆ ₹800, ಕನಕಾಂಬರ ₹1,000, ಸೇವಂತಿಗೆ ₹150, ಗುಲಾಬಿ ₹200, ಸುಗಂಧರಾಜ ಹೂ ₹200ಗೆ ಏರಿಕೆಯಾಗಿದೆ.
ಹಣ್ಣುಗಳ ದರ ಕೆಜಿಗೆ ದ್ರಾಕ್ಷಿ ಹಣ್ಣು ₹200, ಸೇಬು ₹160, ದಾಳಿಂಬೆ ₹120, ಏಲಕ್ಕಿ ಬಾಳೆ ₹120, ಸೀತಾಫಲ ₹100, ಕಿತ್ತಳೆ ₹80, ಬಾಳೆ ₹40ಕ್ಕೆ ಏರಿಕೆ ಕಂಡಿದೆ. ಇನ್ನೂ, ಕಳೆದ ತಿಂಗಳು ಕೆಜಿಗೆ ₹100 ಇದ್ದ ಟೊಮೆಟೊ ಬೆಲೆ ₹15 ಆಗಿದೆ.
ಇದನ್ನೂ ಓದಿ: ಎಚ್ಚರಿಕೆ… ಈ ಕೆಲಸಗಳನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 30 ಕೊನೆ ದಿನ; ಬೇಗನೆ ಈ ಕೆಲಸ ಮಾಡಿ
Price hike: ಖಾಸಗಿ ಬಸ್ಗಳ ಟಿಕೆಟ್ ದುಬಾರಿ!!
ಪ್ರತಿ ಬಾರಿ ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರಿಗೆ ದುಪಟ್ಟು ಹಣ ವಸೂಲಿ ಮಾಡುತ್ತವೆ. ಇದೀಗ ಸೆಪ್ಟಂಬರ್ 18ರಂದು ಗಣೇಶ ಹಬ್ಬ ಹಿನ್ನೆಲೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರಗಳಲ್ಲಿ ಭಾರೀ ಹೆಚ್ಚಳ ಮಾಡಿದ್ದಾರೆ. ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಸಾಮಾನ್ಯ ದಿನಗಳಲ್ಲಿ 500-700 ರೂಪಾಯಿ ಇದ್ದ ಟಿಕೆಟ್ ದರವನ್ನು 1500- 2500 ರೂಪಾಯಿಗೆ ಹೆಚ್ಚಳ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಗ್ಯಾಸ್, ಸೆಳೆತ, ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗೆ ನೈಸರ್ಗಿಕ ಪರಿಹಾರ
ಪ್ರಮುಖ ಲಿಂಕುಗಳು/ Important links
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
| ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |



