LIC schemes : 2025ರಲ್ಲಿ ಭಾರತೀಯ ಜೀವ ವಿಮಾ ನಿಗಮ ಜನರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ. ಕೇವಲ ಜೀವಕ್ಕೆ ರಕ್ಷಣೆ ಮಾತ್ರವಲ್ಲದೆ ಹೂಡಿಕೆ, ಪಿಂಚಣಿ ಮತ್ತು ಹಣದ ಉಳಿತಾಯ ಮಾಡಲು ಐದು ವಿಶಿಷ್ಟ ಪ್ಲಾನ್‌ಗಳನ್ನ ತಂದಿದೆ. ಈ ಯೋಜನೆಗಳಲ್ಲಿ ವಯಸ್ಸಾದವರು ಮಾತ್ರವಲ್ಲದೆ ಯುವಕ-ಯುವತಿಯರು, ಮಕ್ಕಳು ಕೂಡ ಹೂಡಿಕೆ ಪ್ರಾರಂಭಿಸಬಹುದು. ಎಲ್ಲರಿಗೂ ಇಲ್ಲಿ ಸೂಕ್ತವಾದ ಆರ್ಥಿಕ ಭದ್ರತೆ ಸಿಗೋದು ಪಕ್ಕಾ. ಆ ಟಾಪ್ 5 ಸ್ಟೀಮ್‌ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಎಲ್‌ಐಸಿ ಪ್ರೊಟೆಕ್ಷನ್ ಪ್ಲಸ್
ಎಲ್‌ಐಸಿ ಪ್ರೊಟೆಕ್ಷನ್ ಪ್ಲಸ್ ಈ ಯೋಜನೆ ನಿಮಗೆ ಲೈಫ್ ಇನ್ಸೂರೆನ್ಸ್ ಜೊತೆಗೆ ಇನ್ವೆಸ್ಟ್‌ಮೆಂಟ್ ಬೆನಿಫಿಟ್ ಕೂಡ ನೀಡುತ್ತದೆ. ಇದೊಂದು ಲಿಂಕ್ಸ್ ಸೇವಿಂಗ್ಸ್ ಪ್ಲಾನ್ ಆಗಿರೋದ್ರಿಂದ, ನಿಮ್ಮ ದುಡ್ಡು ಎಲ್ಲಿ ಹೂಡಿಕೆ ಆಗಬೇಕು ಅನ್ನೋದನ್ನ ನೀವೇ ನಿರ್ಧರಿಸಬಹುದು. ಈ ಯೋಜನೆಯಲ್ಲಿ ನೀವು ವಿಮೆ ಮೊತ್ತವನ್ನ ಏರಿಸಬಹುದು ಅಥವಾ ಇಳಿಸಬಹುದು. ಕೈಯಲ್ಲಿ ಎಕ್ಸ್ ಟ್ರಾ ದುಡ್ಡಿದ್ದಾಗ ‘ಟಾಪ್-ಅಪ್‘ ಕಟ್ಟಬಹುದು. 18 ರಿಂದ 65 ವರ್ಷದವರು ಇದರಲ್ಲಿ ಹೂಡಿಕೆ ಪ್ರಾರಂಭಿಸಬಹುದು.
ಎಲ್‌ಐಸಿ ಬಿಮಾ ಕವಚ
ಎಲ್‌ಐಸಿ ಬಿಮಾ ಕವಚ ಅನ್ನೋದು ಪಕ್ಕಾ ಲೈಫ್ ಸೇಫ್ಟಿ ಪ್ಲಾನ್. ಇದರಲ್ಲಿ ಮಾರ್ಕೆಟ್ ರಿಸ್ಕ್ ಇಲ್ಲ, ಇದೊಂದು ಲಿಂಕ್ ಮಾಡದ ಶುದ್ಧ ಜೀವ ರಕ್ಷಣಾ ಯೋಜನೆ.
ಒ೦ದು ವೇಳೆ ಪಾಲಿಸಿದಾರನಿಗೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ, ಫ್ಯಾಮಿಲಿಗೆ ಗ್ಯಾರಂಟಿ ದುಡ್ಡು ಸಿಗಲಿದ್ದು, ಈ ದುಡ್ಡನ್ನ ಒಂದೇ ಸಲ ಪಡೆಯಬಹುದು ಅಥವಾ ತಿಂಗಳು ತಿಂಗಳು ಕಂತಿನ ರೂಪದಲ್ಲೂ ಪಡೆಯೋ ಅವಕಾಶ ಇದೆ. ಕುಟುಂಬದ ಆರ್ಥಿಕ ಭದ್ರತೆಗೆ ಇದು ಹೇಳಿ ಮಾಡಿಸಿದ ಹಾಗಿದೆ.
ಜನ್ ಸುರಕ್ಷಾ ಯೋಜನೆ
ಮಧ್ಯಮ ವರ್ಗದವರಿಗೆ ಮತ್ತು ಕಡಿಮೆ ಆದಾಯ ಇರೋರಿಗೆ ‘ಜನ್ ಸುರಕ್ಷಾ’ ಸೂಕ್ತವಾಗಿದೆ. ಇದಕ್ಕೆ ಯಾವುದೇ ದೊಡ್ಡ ಮೆಡಿಕಲ್ ಟೆಸ್ಟ್ ಬೇಕಿಲ್ಲ. ತು೦ಬಾ ಕಮ್ಮಿ ಪ್ರೀಮಿಯಂ ಕಟ್ಟಿ ಈ ಪಾಲಿಸಿ ತಗೋಬಹುದು. ವಿಮೆ ಅವಧಿ ಮುಗಿಯೋವರೆಗೂ ಪಾಲಿಸಿದಾರರು ಬದುಕಿದ್ರೆ, ಮೆಕ್ಯೂರಿಟಿ ಸಮಯದಲ್ಲಿ ಒ೦ದು ದೊಡ್ಡ ಮೊತ್ತ ಕೈಗೆ ಸಿಗುತ್ತೆ. ಏನಾದ್ರೂ ಆದ್ರೆ ಫ್ಯಾಮಿಲಿಗೆ ಆಸರೆಯಾಗುತ್ತೆ. ಸರಳವಾಗಿ ವಿಮೆ ಬೇಕು ಅನ್ನೋರಿಗೆ ಇದು ಬೆಸ್ಟ್.
ಎಲ್‌ಐಸಿ ಬಿಮಾ ಲಕ್ಷ್ಮಿ ಯೋಜನೆ
ಹೆಣ್ಣುಮಕ್ಕಳಿಗಾಗಿಯೇ ಸ್ಪೆಷಲ್ ಆಗಿ ತಂದಿರೋ ಪ್ಲಾನ್ ‘ಎಲ್‌ಐಸಿ ಬಿಮಾ ಲಕ್ಷ್ಮಿ’ (ಯೋಜನೆ 881). ಇದರ ಸ್ಪೆಷಾಲಿಟಿ ಏನಂದ್ರೆ, ಪ್ರತಿ 2 ಅಥವಾ 4 ವರ್ಷಕ್ಕೊಮ್ಮೆ ನಿಮ್ಮ ಕೈಗೆ ಸ್ವಲ್ಪ ದುಡ್ಡು ವಾಪಸ್ ಬರುತ್ತೆ. ಅಂದ್ರೆ ದುಡ್ಡು ರೊಟೇಶನ್ ಆಗ್ತಾ ಇರುತ್ತೆ. ಜೊತೆಗೆ ಅನಾರೋಗ್ಯಕ್ಕೆ ತುತ್ತಾದ್ರೆ ಅದಕ್ಕೂ ಕವರೇಜ್ ಇದೆ. ಮೆಕ್ಯೂರಿಟಿ ಟೈಮ್ ಅಲ್ಲೂ ಕೈತುಂಬಾ ದುಡ್ಡು ಗ್ಯಾರಂಟಿ. ಲೇಡೀಸ್‌ಗೆ ಇದು ಬೆಸ್ಟ್ ಸೇವಿಂಗ್ಸ್ ಪ್ಲಾನ್.
ಎಲ್‌ಐಸಿ ಸ್ಮಾರ್ಟ್ ಪಿಂಚಣಿ ಯೋಜನೆ
ವಯಸ್ಸಾದ ಮೇಲೆ ಯಾರ ಮು೦ದೆಯೂ ಕೈ ಚಾಚಬಾರದು ಅ೦ದ್ರೆ ‘ಎಲ್‌ಐಸಿ ಸ್ಮಾರ್ಟ್ ಪಿಂಚಣಿ’ (ಯೋಜನೆ 879) ಮಾಡಿ, ಒಮ್ಮೆ ದೊಡ್ಡ ಮೊತ್ತದ ಹಣ ಡೆಪಾಸಿಟ್ ಮಾಡಿದ್ರೆ ಸಾಕು, ತಕ್ಷಣದಿಂದಲೇ ಪಿಂಚಣಿ ಬರೋಕೆ ಶುರುವಾಗುತ್ತೆ. ಇದನ್ನ ನೀವು ಒಬ್ಬರೇ ತಗೋಬಹುದು ಅಥವಾ ಗಂಡ-ಹೆಂಡತಿ ಜ೦ಟಿಯಾಗಿ ಕೂಡ ತಗೋಬಹುದು. ಇದು ತಕ್ಷಣದ ಪಿಂಚಣಿ ನೀಡುವ ಯೋಜನೆಯಾಗಿದೆ.




