Federal Bank Scholarship | 1 ಲಕ್ಷ ರೂ ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನ, ಲ್ಯಾಪ್‌ಟಾಪ್ ಖರೀದಿಗೆ 40,000 ರೂ, ಅರ್ಜಿ ಆಹ್ವಾನ

Federal Bank Scholarship | ಶಿಕ್ಷಣವೆಂದರೆ ಭವಿಷ್ಯಕ್ಕೆ ಹೂಡಿಕೆಯಾದ ಅಮೂಲ್ಯ ಸಂಪತ್ತು. ಈ ನಂಬಿಕೆಯನ್ನು ಬಲಪಡಿಸಲು ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನವು 2025-26 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿನ ಸಂಸ್ಥಾಪಕ…

Federal Bank Scholarship, purchase of laptop

Federal Bank Scholarship | ಶಿಕ್ಷಣವೆಂದರೆ ಭವಿಷ್ಯಕ್ಕೆ ಹೂಡಿಕೆಯಾದ ಅಮೂಲ್ಯ ಸಂಪತ್ತು. ಈ ನಂಬಿಕೆಯನ್ನು ಬಲಪಡಿಸಲು ಫೆಡರಲ್ ಬ್ಯಾಂಕ್ ಹಾರ್ಮಿಸ್ ಸ್ಮಾರಕ ಪ್ರತಿಷ್ಠಾನವು 2025-26 ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿನ ಸಂಸ್ಥಾಪಕ ಶ್ರೀ ಕೆ.ಪಿ. ಹಾರ್ಮಿಸ್ ಅವರ ಸ್ಮರಣಾರ್ಥ ಆರಂಭಿಸಲಾದ ಈ ಯೋಜನೆ, ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿ೦ದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.

ಅರ್ಹ ಅಭ್ಯರ್ಥಿಗಳು

ಈ ವಿದ್ಯಾರ್ಥಿವೇತನಕ್ಕೆ ಕೆಳಗಿನ ವೃತ್ತಿಪರ ಪದವಿ ಪಠ್ಯಕ್ರಮಗಳ ಮೊದಲ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:

  • MBBS, BDS, BVSC
  • B.E / B.Tech
  • B.Sc ನರ್ಸಿಂಗ್, B.Sc ಕೃಷಿ
  • ಪೂರ್ಣಕಾಲಿಕ MBA / PGDM

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ವಿದ್ಯಾರ್ಥಿಗಳಿಗೆ ಅವಕಾಶವಿದೆ.

Vijayaprabha Mobile App free

ಸೇನಾ ಕುಟುಂಬಗಳ ಅವಲಂಬಿತರು ಮತ್ತು ದೃಷ್ಟಿ/ವಾಕ್/ಶ್ರವಣ ದೋಷ ಹೊಂದಿರುವ ವಿದ್ಯಾರ್ಥಿಗಳಿಗೂ ಈ ವೇತನ ಲಭ್ಯ.

ವಿದ್ಯಾರ್ಥಿವೇತನದ ಪ್ರಯೋಜನಗಳು

ಶೈಕ್ಷಣಿಕ ವೆಚ್ಚ: ವರ್ಷಕ್ಕೆ ಗರಿಷ್ಠ ₹1,00,000 ವರೆಗೆ ಟ್ಯೂಷನ್ ಫೀ ಮತ್ತು ಇತರ ಶೈಕ್ಷಣಿಕ ಖರ್ಚುಗಳ 100% ಮರುಪಾವತಿ.

ಲ್ಯಾಪ್ಟಾಪ್/ಟ್ಯಾಬ್ಲೆಟ್: ಲ್ಯಾಪ್ಟಾಪ್ ಖರೀದಿಗೆ ₹40,000 ಅಥವಾ ಟ್ಯಾಬ್ಲೆಟ್‌ಗೆ ₹30,000 ವರೆಗಿನ ಸಹಾಯ (ವಾರ್ಷಿಕ ₹1 ಲಕ್ಷ ಮಿತಿಯೊಳಗೆ).

ಈ ಯೋಜನೆ ವಿದ್ಯಾರ್ಥಿಗಳ ಆರ್ಥಿಕ ಭಾರವನ್ನು ಕಡಿಮೆ ಮಾಡುವುದರ ಜೊತೆಗೆ ತಂತ್ರಜ್ಞಾನದಲ್ಲಿ ಮು೦ದೆ ಸಾಗುವ ಅವಕಾಶವನ್ನೂ ನೀಡುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ಅಧಿಕೃತ ಪೋರ್ಟಲ್‌ಗೆ https://-scholarships.federalbank.co.in:6443/fedschlr-shipportal/ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ ಮೆರಿಟ್ ಮತ್ತು ಅರ್ಹತೆ ಆಧಾರದ ಮೇಲೆ ನಡೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 31, 2025.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.