ದಾವಣಗೆರೆ: ಜಿಲ್ಲೆಯಲ್ಲಿ ರೈತರ ಹೆಸರಲ್ಲಿ ಕೋಟ್ಯಂತರ ರೂ ಸಾಲ ಪಡೆದಿದ್ದ ಕಂಪನಿ ಪ್ರಕರಣದ ಬಗ್ಗೆ ಸಿಬಿಐ ಅಧಿಕಾರಿಗಳೇ ತನಿಖೆ ನಡೆಸಲಿದ್ದಾರೆ ಎಂದುದಾವಣಗೆರೆಯಲ್ಲಿ ಎಸ್ ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಜಾಮೀನು ಇಲ್ಲದ ರೈತರ ಹೆಸರಲ್ಲಿ ತಲಾ ೪೮ ಲಕ್ಷ ರೂಪಾಯಿ ಸಾಲ ಪಡಿದಿದ್ದಾರೆ. ಸಾಲ ಪಡೆದವರೆಲ್ಲ ಅಡಿಕೆ ಬೆಳೆಗಾರರು ಎಂದು ನಕಲಿ ಧಾಖಲೆ ಸೃಷ್ಟಿಸಿ ಸಿಜಿಆರ್ ಕಂಪನಿ ಸಾಲ ಪಡೆದಿದೆ. ದಾವಣಗೆರೆ ನಗರದ ಯುಕೋ ಬ್ಯಾಂಕ್ ಸಿಜಿಆರ್ ಕಂಪನಿ ತಾಳಕ್ಕೆ ಕುಣಿದು ಶಾಖೆಯಲ್ಲಿ ಹಳೇ ಮನೆ ಹೊಂದಿರುವ ಅಪ್ಪ, ಮಗನಿಗೂ ಕೂಡ 1 ಕೋಟಿ ಸಾಲ ನೀಡಿದೆ ಎಂದು ಎಸ್ ಪಿ ಹನುಮಂತರಾಯ ಅವರು ಹೇಳಿದ್ದಾರೆ.
ಜಗಳೂರು ತಾಲೂಕಿನ ಹಿರೇ ಅರಕೆರೆ, ಕೆರೆಯಾಗಳಹಳ್ಳಿ ಗ್ರಾಮಗಳ ಗೋದಾಮುಗಳಲ್ಲಿ ಖಾಲಿ ಚೀಲಗಳನ್ನಿಟ್ಟು ಅಡಿಕೆ ಇದೆ ಎಂದು ತೋರಿಸಿ ಸಿಜಿಆರ್ ಕಂಪನಿ ಸಾಲ ಪಡೆದು ವಂಚಿಸಿದೆ. ಇನ್ನು ಈ ವಂಚನೆಯ ಪ್ರಕರಣದಲ್ಲಿ ಸಿಜಿಆರ್ ಕಂಪನಿ ಸೇರಿದಂತೆ ಬ್ರೋಕರ್ ಗಳು ಮಧ್ಯವರ್ತಿಗಳು ಸಹ ಶಾಮೀಲು ಆಗಿದ್ದಾರೆ ಎಂದು ಎಸ್ ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ