ಮದುವೆ ಹೆಣ್ಣಿಗೆ ಡ್ಯಾನ್ಸ್ ಮಾಡುವಂತೆ ವರನ ಸ್ನೇಹಿತರಿಂದ ಬಲವಂತ; ಮದುವೆ ಕ್ಯಾನ್ಸಲ್

ಲಕ್ನೋ: ಕುಡಿದ ಮತ್ತಿನಲ್ಲಿ ಸ್ನೇಹಿತರು ಮಾಡಿದ ಕೆಲಸದಿಂದ ಒಬ್ಬ ವ್ಯಕ್ತಿಯ ಮದುವೆಯು ಮಂಟಪದವರೆಗೂ ಬಂದು ನಿಂತಿರುವ ಘಟನೆ ನಡೆದಿದೆ. ವರನ ಸ್ನೇಹಿತರು ವಧುವನ್ನು ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದರಿಂದ ಆಕೆಯ ಕುಟುಂಬಸ್ಥರು ಮದುವೆ ಕ್ಯಾನ್ಸಲ್…

marriage vijayaprabha

ಲಕ್ನೋ: ಕುಡಿದ ಮತ್ತಿನಲ್ಲಿ ಸ್ನೇಹಿತರು ಮಾಡಿದ ಕೆಲಸದಿಂದ ಒಬ್ಬ ವ್ಯಕ್ತಿಯ ಮದುವೆಯು ಮಂಟಪದವರೆಗೂ ಬಂದು ನಿಂತಿರುವ ಘಟನೆ ನಡೆದಿದೆ. ವರನ ಸ್ನೇಹಿತರು ವಧುವನ್ನು ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದರಿಂದ ಆಕೆಯ ಕುಟುಂಬಸ್ಥರು ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಈ ಘಟನೆ ಇತ್ತೀಚೆಗೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಕನ್ನೌಜ್ ಜಿಲ್ಲೆಯ ಯುವತಿಯೊಬ್ಬಳು ಕೆಲವು ತಿಂಗಳ ಹಿಂದೆ ಬರೇಲಿಯ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಶುಕ್ರವಾರ ಮದುವೆಯ ದಿನವಾದ್ದರಿಂದ, ಮೇಳ ತಾಳಗಳೊಂದಿಗೆ ವದುವಿನ ಕಡೆಯವರು ಬರೇಲಿಯಲ್ಲಿರುವ ವರನ ಮನೆಗೆ ಆಗಮಿಸಿದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ತಾಳಿ ಕಟ್ಟುವ ಸಂದರ್ಭದಲ್ಲಿ ವರನ ಸ್ನೇಹಿತರು ವಧುವಿಗೆ ಬಲವಂತವಾಗಿ ಡ್ಯಾನ್ಸ್ ಮಾಡಬೇಕೆಂದು ಡ್ಯಾನ್ಸ್ ಮಾಡಿಸಿಕೊಳ್ಳುತ್ತಾ ಮದುವೆ ಮಂಟಪದ ವೇದಿಕೆಯವರೆಗೂ ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ಬಗ್ಗೆ ವಧುವಿನ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರಿಂದ ಎರಡು ಬಣಗಳ ನಡುವೆ ಜಗಳಕ್ಕೆ ಕಾರಣವಾಯಿತು. ಇದರಿಂದ ಘಟನಾ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಯಿತು. ವಧುವಿನ ಕುಟುಂಬದವರು ವರನ ಕುಟುಂಬದ ಮೇಲೆ ಹೆಚ್ಚು ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ದೂರಿದರು. ಪೋಲೀಸರ ಮಧ್ಯಸ್ಥಿಕೆಯಿಂದ ವರನ ಕುಟುಂಬದವರು 6.5 ಲಕ್ಷ ರೂ. ಪಾವತಿಸಲು ತೀರ್ಮಾನಿಸಲಾಯಿತು. ಮದುವೆ ನಡೆಸುವುದಕ್ಕೆ ವರನ ಕಡೆಯವರು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ತನಗೆ ಮರ್ಯಾದೆ ಕೊಡದ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಳ್ಳಲು ಇಷ್ಟವಿವೆಂದು ವಧುವು ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದಾಳೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.