BIG NEWS: ಕೇಂದ್ರದ ನಿಯಮ ಪಾಲಿಸದ ಫೇಸ್‌ಬುಕ್, ಟ್ವಿಟರ್, instagram?; ನಿಷೇಧದ ಭೀತಿಯಲ್ಲಿ ಸೋಷಿಯಲ್ ಮೀಡಿಯಾಗಳು!

ನವದೆಹಲಿ: ಡಿಜಿಟಲ್ ಕಂಟೆಂಟ್ ಗಳ ಮೇಲೆ ನಿಯಂತ್ರಣ ಹೇರಲು, ಕೇಂದ್ರ ಸರ್ಕಾರದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ನಿಯಮಗಳು 2021 ನಾಳೆಯಿಂದ ಜಾರಿಯಾಗಲಿದ್ದು, ಇದುವರೆಗೂ ಈ ನಿಯಮ ಒಪ್ಪದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ದೇಶದಲ್ಲಿ ಸ್ಥಗಿತಗೊಳ್ಳುವ…

Social-Media-vijayaprabha-news

ನವದೆಹಲಿ: ಡಿಜಿಟಲ್ ಕಂಟೆಂಟ್ ಗಳ ಮೇಲೆ ನಿಯಂತ್ರಣ ಹೇರಲು, ಕೇಂದ್ರ ಸರ್ಕಾರದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ನಿಯಮಗಳು 2021 ನಾಳೆಯಿಂದ ಜಾರಿಯಾಗಲಿದ್ದು, ಇದುವರೆಗೂ ಈ ನಿಯಮ ಒಪ್ಪದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ದೇಶದಲ್ಲಿ ಸ್ಥಗಿತಗೊಳ್ಳುವ ಭೀತಿ ಎದುರಿಸುತ್ತಿವೆ.

ಹೌದು ಫೆ.25ರಂದು ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ & ಒಟಿಟಿ ಫ್ಲಾಟ್‌ಫಾರ್ಮ್‌ಗಳಿಗೆ ಹೊಸ ನಿಯಮ ಘೋಷಿಸಿ, ಅದನ್ನು ಅನುಸರಿಸಲು 3 ತಿಂಗಳ ಸಮಯ ನೀಡಲಾಗಿದ್ದು, ಅದು ಇಂದಿಗೆ ಕೊನೆಗೊಳ್ಳುತ್ತದೆ.

ಆದರೆ, ಕೇಂದ್ರ ಸರಕಾರ ಜಾರಿ ಮಾಡಿರುವ ನಿಯಮಗಳನ್ನು ಟ್ವಿಟರ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳು ಇನ್ನು ಅನುಸರಿಸಿಲ್ಲ. ಇನ್ನು ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ನಿಯಮ ಪಾಲಿಸದ ಸಾಮಾಜಿಕ ಜಾಲ ತಾಣಗಳನ್ನು ಕೇಂದ್ರ ಸರಕಾರ ಬ್ಲಾಕ್‌ ಮಾಡುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ.

Vijayaprabha Mobile App free

ಇನ್ನು ಈ ನಿಯಮವನ್ನು ಅನುಸರಿಸಲು ಸಾಮಾಜಿಕ ಜಾಲತಾಣ ಕಂಪನಿಗಳು, ಇನ್ನೂ 6 ತಿಂಗಳು ಸಮಯ ಕೋರಿವೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.