ಇಳುವರಿ ಕಡಿಮೆಯಾಗುವ ಭೀತಿಯಿಂದ ದೇಶದಿಂದ ರಫ್ತಾಗುವ ಅಕ್ಕಿಗೆ ಅಕ್ಕಿ ರಫ್ತಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಅಕ್ಕಿ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರ ತೆರಿಗೆ ವಿಧಿಸಿದೆ.
ಹೌದು, ಬಾಸ್ಮತಿ ಮತ್ತು ಕುಚ್ಚಲು ಅಕ್ಕಿಗೆ ಈ ತೆರಿಗೆಯಿಂದ ವಿನಾಯಿತಿ ನೀಡಲಾಗಿದ್ದು, ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡುವಾಗ ಶೇ.20 ರಫ್ತು ಸುಂಕವನ್ನ ಇನ್ನು ಮುಂದೆ ಪಾವತಿಸಬೇಕಾಗುತ್ತದೆ. ಹಾಗಾಗಿ ಇನ್ನು ಮುಂದೆ ವಿದೇಶಕ್ಕೆ ಅಕ್ಕಿ ಕಳುಹಿಸುವುದು ದುಬಾರಿಯಾಗಲಿದೆ. ಈ ಸೂಚನೆಯು ಇಂದಿನಿಂದಲೇ (ಸೆ.9) ಜಾರಿಗೆ ಬರಲಿದ್ದು, ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಇನ್ನು, ಕೆಲವು ರಾಜ್ಯಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ ಭತ್ತ ಬಿತ್ತನೆಯ ಪ್ರದೇಶ ಇಳಿಕೆಯಾಗಿದೆ.