ಚಿತ್ರದುರ್ಗ: ಮುರುಘಾಶ್ರೀ ವಿರುದ್ದದ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತ ಬಾಲಕಿಯೊಬ್ಬಳ ಚಿಕ್ಕಪ್ಪ ಚಿತ್ರದುರ್ಗ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ಹೌದು, ದೂರಿನಲ್ಲಿ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ವಿರುದ್ದ ಗಂಭೀರ ಆರೋಪ ಮಾಡಲಾಗಿದ್ದು, ಈ ಎಲ್ಲ ವಿದ್ಯಮಾನಕ್ಕೆ ನೇರವಾಗಿ ಬಸವರಾಜನ್ ಕಾರಣ. ಖಾಲಿ ಕಾಗದದ ಮೇಲೆ ಬಾಲಕಿಯ ಸಹಿ ತೆಗೆದುಕೊಂಡು, ತಮಗೆ ಬೇಕಾದಂತೆ ಬರೆಯಲಾಗಿದೆ ಎಂದು ಬಾಲಕಿಯರ ಚಿಕ್ಕಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಜುಲೈ 27ರಂದು ಬಸವರಾಜನ್ ನನ್ನನ್ನು ಮಠಕ್ಕೆ ಕರೆಸಿಕೊಂಡಿದ್ರು. ಆಗ ನಮ್ಮ ಮಕ್ಕಳು ಬಸವರಾಜನ್ ಮನೆಯಲ್ಲಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಅವರ ವಿದ್ಯಾಭ್ಯಾಸ, ಮದುವೆ ಜವಾಬ್ದಾರಿ ನನ್ನದು ಎಂದು ಬಸವರಾಜನ್ ಹೇಳಿದ್ರು. ಬಳಿಕ ಬಾಲಕಿಯರನ್ನು ನಮ್ಮ ಜೊತೆ ಕಳಿಸಿಕೊಟ್ಟಿರುವುದಾಗಿ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಸಂತ್ರಸ್ತ ಬಾಲಕಿಯೊಬ್ಬಳ ಚಿಕ್ಕಪ್ಪ ಹೇಳಿದ್ದಾರೆ.