ಸಿದ್ದರಾಮಯ್ಯ ಹೆಸರು ಹೇಳಿದರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ: ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದು ಒಂದು ಕೆಟ್ಟ ಹೆಸರು. ಇಂಥ ರಾಷ್ಟ್ರದ್ರೋಹಿಯನ್ನು ನನ್ನ ಜೀವನದಲ್ಲಿ ಕಂಡಿರಲಿಲ್ಲ ಎಂದು ಏಕವಚನದಲ್ಲೇ ಮಾತನಾಡಿದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎನ್ನುವ ಕೆಟ್ಟ ಪದ ಕೇಳಿ…

Siddaramaiah-Eshwarappa-vijayaprabha-news

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವುದು ಒಂದು ಕೆಟ್ಟ ಹೆಸರು. ಇಂಥ ರಾಷ್ಟ್ರದ್ರೋಹಿಯನ್ನು ನನ್ನ ಜೀವನದಲ್ಲಿ ಕಂಡಿರಲಿಲ್ಲ ಎಂದು ಏಕವಚನದಲ್ಲೇ ಮಾತನಾಡಿದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎನ್ನುವ ಕೆಟ್ಟ ಪದ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿದೆ ಎಂದು ಹೇಳಿದ್ದಾರೆ.

ಅವರ ಹೆಸರು ಹೇಳಿದರೆ ನನ್ನ ಬಾಯಲ್ಲಿ ಹುಳ ಬೀಳುತ್ತದೆ ಅನಿಸುತ್ತದೆ. ಸಿದ್ದರಾಮಯ್ಯ ಬಗ್ಗೆ ಈ ಹಿಂದೆ ಅಲ್ಪಸ್ವಲ್ಪ ಗೌರವ ಇತ್ತು. ಮುಸಲ್ಮಾನರ ಏರಿಯಾದಲ್ಲೇಕೆ ವೀರ ಸಾವರ್ಕರ್‌ ಭಾವಚಿತ್ರ ಹಾಕಬೇಕಿತ್ತು ಎಂದು ಯಾವಾಗ ಹೇಳಿಕೆ ನೀಡಿದರೋ ನಿಜಕ್ಕೂ ಅವರ ಮೇಲೆ ಬೇಸರವಾಗಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಚಾಕು, ಚೂರಿ ಹಾಕುವವರಿಗೆ ಗುಂಡೇಟು ಹೊಡೆದು ಕೂರಿಸಲಾಗಿದ್ದು, ಇದು ಕೇವಲ ಸ್ಯಾಂಪಲ್‌ ಅಷ್ಟೇ. ‘ಪಿಕ್ಚರ್‌ ಅಭೀ ಬಾಕಿ ಹೈ’ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ

Vijayaprabha Mobile App free

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಕಡೆಗೂ ಸ್ವಾತಂತ್ರ್ಯವೀರರ ಭಾವಚಿತ್ರ ಹಾಕುತ್ತೇವೆ. ಇದು ನಮ್ಮ ದೇಶದ ಜಾಗ. ಮುಸಲ್ಮಾನರ ಜಾಗ ಎಂದು ಪ್ರತ್ಯೇಕವಾಗಿ ಎಲ್ಲೂ ಇಲ್ಲ. ಮುಸ್ಲಿಮರ ಓಟ್‌ಗಾಗಿ ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ.

ಇಂಥ ಮುಖ್ಯಮಂತ್ರಿಯನ್ನು ಕಂಡಿರುವುದು ನಮ್ಮ ದೇಶ ಹಾಗೂ ರಾಜ್ಯದ ದುರ್ದೈವವೇ ಸರಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಏನೋ ಉತ್ತರ ಕೊಡಬೇಕೋ ಅದನ್ನು ರಾಜ್ಯದ ಜನ ಕೊಡುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.