1 ವರ್ಷ ಬಳಿಕವೇ ಪಿಎಫ್ ಕ್ಲೇಮ್ ಹಣ; ಇಪಿಎಫ್‌ಒ ಹೊಸ ನಿಯಮ ಜಾರಿ – ಉದ್ಯೋಗಿಗಳಿಗೆ ದೊಡ್ಡ ಶಾಕ್

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯಾದ ಇಪಿಎಫ್‌ಒ ಹೊಸ ನಿಯಮ ಜಾರಿಗೆ ತಂದಿದೆ. ಈಗಾಗಲೇ ಕೆಲಸ ಬಿಟ್ಟ ಅಥವಾ ಕಂಪನಿಯಿಂದ ವಜಾಗೊಂಡ ನೌಕರರು ಕೆಲಸ ಬಿಟ್ಟ ಎರಡು ತಿಂಗಳಲ್ಲೇ ಪಿಎಫ್ ಕ್ಲೇಮ್ ಮಾಡಬಹುದಿತ್ತು.…

EPFO

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯಾದ ಇಪಿಎಫ್‌ಒ ಹೊಸ ನಿಯಮ ಜಾರಿಗೆ ತಂದಿದೆ. ಈಗಾಗಲೇ ಕೆಲಸ ಬಿಟ್ಟ ಅಥವಾ ಕಂಪನಿಯಿಂದ ವಜಾಗೊಂಡ ನೌಕರರು ಕೆಲಸ ಬಿಟ್ಟ ಎರಡು ತಿಂಗಳಲ್ಲೇ ಪಿಎಫ್ ಕ್ಲೇಮ್ ಮಾಡಬಹುದಿತ್ತು. ಆದರೆ ಹೊಸ ನಿಯಮದ ಪ್ರಕಾರ, ಒಂದು ವರ್ಷ ಕಳೆದ ನಂತರವೇ ಪಿಎಫ್ ಫೈನಲ್ ಸೆಟಲ್‌ಮೆಂಟ್‌ಗೆ ಅರ್ಜಿ ಸಲ್ಲಿಸಬಹುದು.

ಇದಲ್ಲದೆ, ಪಿಂಚಣಿ ಮೊತ್ತ ಪಡೆಯಲು ಮೂರು ವರ್ಷಗಳ ಬಳಿಕವೇ ಅವಕಾಶ ನೀಡಲಾಗುವುದು. ಈ ಬದಲಾವಣೆಗಳು ಸಾವಿರಾರು ಖಾಸಗಿ ನೌಕರರಿಗೆ ತೊಂದರೆ ಉಂಟುಮಾಡಲಿವೆ. 2025ರಲ್ಲಿಯೇ ಗೂಗಲ್, ಮೈಕ್ರೋಸಾಫ್ಟ್, ಟಿಸಿಎಸ್, ಇನ್ಫೋಸಿಸ್ ಸೇರಿ ಸುಮಾರು 50 ಸಾವಿರ ಉದ್ಯೋಗಿಗಳು ವಜಾಗೊಂಡಿರುವ ಹಿನ್ನೆಲೆ, ಈ ನಿರ್ಧಾರ ಚರ್ಚೆಗೆ ಕಾರಣವಾಗಿದೆ.

ಇಪಿಎಫ್‌ಒ ಹೇಳುವ ಪ್ರಕಾರ, ಈ ನಿಯಮವು ಕ್ಲೇಮ್‌ಗಳಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣ ತರಲು ಉದ್ದೇಶಿತವಾದರೂ, ಹೀಗೆ ವಜಾಗೊಂಡ ನೌಕರರಿಗೆ ಪಿಎಫ್ ಹಣವೇ ಆಧಾರವಾಗಿರುತ್ತದೆ. ಆದರೆ, ಈಗ ಹೊಸ ನಿಯಮವನ್ನು ಜಾರಿಗೆ ತಂದಿರುವುದು ನೌಕರರಿಗೆ ಕಷ್ಟವಾಗಲಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.