ಕರ್ನಾಟಕದಲ್ಲಿ SIRಗೆ ಚುನಾವಣಾ ಆಯೋಗ ಸಜ್ಜು; ಮತದಾರ ಏನು ಮಾಡಬೇಕು?

Voter List | ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ರಾಜ್ಯ ಚುನಾವಣಾ ಆಯೋಗ ಸನ್ನದ್ಧವಾಗಿದೆ. ಹೌದು, ಪೌರತ್ವ ಕಾಯಿದೆ ಪ್ರಕಾರ, ಎಲ್ಲ ಅರ್ಹ ನಾಗರಿಕರ ಹೆಸರು ಸೇರ್ಪಡೆ, ಅನರ್ಹರ ಹೆಸರು…

Voter List

Voter List | ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ರಾಜ್ಯ ಚುನಾವಣಾ ಆಯೋಗ ಸನ್ನದ್ಧವಾಗಿದೆ.

ಹೌದು, ಪೌರತ್ವ ಕಾಯಿದೆ ಪ್ರಕಾರ, ಎಲ್ಲ ಅರ್ಹ ನಾಗರಿಕರ ಹೆಸರು ಸೇರ್ಪಡೆ, ಅನರ್ಹರ ಹೆಸರು ತೆಗೆದುಹಾಕುವುದು ಇದರ ಮುಖ್ಯ ಉದ್ದೇಶ. 2002ರ ನಂತರ ಇದೀಗ 23 ವರ್ಷಗಳ ಬಳಿಕ ಪರಿಷ್ಕರಣೆ ನಡೆಯಲಿದ್ದು, ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಪರಿಷ್ಕರಣೆ ನಡೆಸಲಿದ್ದಾರೆ. ಸೆ.25ಕ್ಕೆ ತಯಾರಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ; ಯಾವೆಲ್ಲ ಗಂಭೀರ ಅಂಶಗಳು?

  • ಎರಡು ಕಡೆ ಹೆಸರು ಇದ್ದರೆ ಫೋಟೊ ಸ್ಕ್ಯಾನಿಂಗ್‌ ಸಿಸ್ಟಮ್‌ ಮೂಲಕ ಪತ್ತೆ ಹಚ್ಚಿ ಕ್ರಮ
  • ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲು
  • ಪರಿಷ್ಕರಣೆ ನಂತರವೂ ಹೆಸರು ಸೇರದಿದ್ದರೆ ಬಿಎಲ್‌ಒಗಳು ಸಹಿ ಮಾಡಿ ನೀಡಿರುವ ನಮೂನೆ ಮೂಲಕ ಪ್ರಶ್ನಿಸಬಹುದು
  • ಪಕ್ಷಗಳ ಸಂಬಂಧ
  • ವಿಶೇಷ ಪರಿಷ್ಕರಣೆ ಕುರಿತು ಈಗಾಗಲೇ ರಾಜಕೀಯ ಪಕ್ಷಗಳ ಸಭೆ ನಡೆಸಿ, ವಿವರ ನೀಡಿಕೆ
  • ಪ್ರತಿ ಬೂತ್‌ಗೆ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ಪಕ್ಷಗಳ ಮುಖಂಡರಿಗೆ ಸೂಚನೆ.

ಕರ್ನಾಟಕದಲ್ಲಿ SIR: ಮತದಾರ ಏನು ಮಾಡಬೇಕು?

ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಕರ್ನಾಟಕದಲ್ಲೂ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ರಾಜ್ಯ ಚುನಾವಣಾ ಆಯೋಗ ಸಂಪೂರ್ಣ ಸಜ್ಜಾಗಿದೆ. ರಾಜ್ಯದಲ್ಲೂ ಪ್ರಕ್ರಿಯೆ ಆರಂಭವಾಗಲಿದೆ. ಮತದಾರರು ಏನು ಮಾಡಬೇಕು?

Vijayaprabha Mobile App free
  • ಗುರುತಿನ ಚೀಟಿಯಲ್ಲಿ ಭಾವಚಿತ್ರ ಅಸ್ಪಷ್ಟವಾಗಿದ್ದರೆ ಹೊಸ ಭಾವಚಿತ್ರ ನೀಡಬೇಕು
  • ಆಯೋಗ ಕೇಳಿರುವ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು
  • ಮನೆಯಲ್ಲಿ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲೂಅರ್ಜಿ ಸಲ್ಲಿಸಬಹುದು.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.