ಬೆಂಗಳೂರು: ಗ್ರಾಪಂ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿಯನ್ನು 5 ವರ್ಷದಿಂದ 30 ತಿಂಗಳಿಗೆ ಕಡಿತಗೊಳಿಸಲಾಗಿದೆ. ಇದರೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಯ ಸರಿ ಸುಮಾರು 1/3ರ ಹುದ್ದೆಗಳನ್ನು ಹಿಂದುಳಿದ ವರ್ಗದವರಿಗೆ ಮೀಸಲಿಡತಕ್ಕದ್ದು ಎಂದು ರಾಜ್ಯ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲು ಅನುಸರಿಸಬೇಕಾದ ನಿಯಮಗಳ ಕುರಿತು ರಾಜ್ಯ ಚುನಾವಣಾ ಆಯೋಗ ಶನಿವಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಗ್ರಾ.ಪಂ.ಅಧ್ಯಕ್ಷ & ಉಪಾಧ್ಯಕ್ಷರ ಹುದ್ದೆಗೆ ತಾಲ್ಲೂಕುವಾರು ಮೀಸಲು ನಿಗದಿಪಡಿಸುವಾಗ SC, ST, ಹಿಂದುಳಿದ ವರ್ಗಗಳ ಸದಸ್ಯರ ಸಂಖ್ಯೆ ಹೆಚ್ಚಿರುವ ಗ್ರಾ.ಪಂ.ಗಳಲ್ಲೇ ಈ ವರ್ಗಗಳಿಗೆ ಅವಕಾಶ ಕಲ್ಪಿಸಬೇಕು. ಒಂದು ವರ್ಗದ ಸದಸ್ಯರು ಸಮನಾಗಿರುವ ಗ್ರಾ.ಪಂ.ಗಳ ಸಂಖ್ಯೆ ಹೆಚ್ಚಿದ್ದಲ್ಲಿ ಲಾಟರಿ ಮೂಲಕ ನಿರ್ಧರಿಸಬೇಕು. SC, ST, ಹಿಂದುಳಿದ ವರ್ಗ(ಎ), ಹಿಂದುಳಿದ ವರ್ಗ(ಬಿ), ಸಾಮಾನ್ಯ ಮಹಿಳೆ & ಸಾಮಾನ್ಯ ವರ್ಗಗಳಿಗೆ ಅನುಕ್ರಮವಾಗಿ ಮೀಸಲು ನಿಗದಿಯಾಗಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.
ಇನ್ನೂ ಅಧ್ಯಕ್ಷ ಹುದ್ದೆ ನಂತರ ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿಯನ್ನು ನೀಡಬೇಕು ಎಂದು ಹೇಳಿದ್ದು, ಎರಡು ಹುದ್ದೆಗೂ ಒಂದೇ ಮೀಸಲಾತಿ ನಿಗದಿಯಾಗಬಾರದು ತಾಲೂಕಿನ ಶೇಕಡಾ 50 ರಷ್ಟು ಸ್ಥಾನಗಳಿಗೆ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ನಿರ್ದೇಶನ ನೀಡಿದೆ.