ಆದಾಯ ತೆರಿಗೆ ಪಾವತಿಯನ್ನು ಸುಲಭಗೊಳಿಸಲು ಜೂನ್ 7ರಂದು ಹೊಸ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭಿಸಲಾಗುತ್ತಿದ್ದು, ಈ ಹೊಸ ಪೋರ್ಟಲ್ ಐಟಿಆರ್ ಸಲ್ಲಿಸಲು ಹಲವು ಸೌಲಭ್ಯಗಳನ್ನು ನೀಡಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹೌದು, ಆದಾಯ ತೆರಿಗೆ ಪಾವತಿಯನ್ನು ಸುಲಭಗೊಳಿಸುವ ಉದ್ದೇಶದಿಂದ ಜೂನ್ 7ರಂದು ಹೊಸ ಇ-ಫೈಲಿಂಗ್ ಪೋರ್ಟಲ್ ಪ್ರಾರಂಬಿಸಲಾಗುತ್ತಿದ್ದು, ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗದವರಿಗೆ ಉಚಿತ ಐಟಿಆರ್ ಪ್ರಿಪರೇಷನ್ ಇಂಟರ್ಯಾಕ್ಟಿವ್ ಸಾಫ್ಟ್‌ವೇರ್ ಲಭ್ಯವಿರಲಿದ್ದು, ಇದು ರಿಟರ್ನ್ಸ್ ಸಲ್ಲಿಸುವಿಕೆ ಬಗ್ಗೆ ಸಂಪೂರ್ಣವಾಗಿ ವಿವರಿಸುತ್ತದೆ.
ಅಲ್ಲದೆ, ರಿಟರ್ನ್ಸ್ ಸಲ್ಲಿಸಲು ಐಟಿಆರ್ ಸಮಸ್ಯೆಗಳ ಪರಿಹಾರಕ್ಕಾಗಿ ಕಾಲ್ ಸೆಂಟರ್ ಸಹಾಯ ಕೂಡ ಲಭ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.