ಅಬುದಾಬಿ : ಅಬುಧಾಬಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದದಲ್ಲಿ ಡ್ವೇನ್ ಬ್ರಾವೋ ಮಹತ್ವದ ಸಾದನೆವೊಂದನ್ನು ಮಾಡಿದ್ದಾರೆ. ಕೋಲ್ಕತಾ ವಿರುದ್ದದ ಪಂದ್ಯದ ಕೊನೆಯ ಓವರ್‌ನಲ್ಲಿ ಶಿವಂ ಮಾವಿ ಅವರ ವಿಕೆಟ್ ಪಡೆಯುವ ಮುಖಾಂತರ ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರು ಐಪಿಎಲ್ ನಲ್ಲಿ ಒಟ್ಟು 150 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದವರಲ್ಲಿ ಡ್ವೇನ್ ಬ್ರಾವೊ ಐದನೆ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಲಸಿತ್ ಮಾಲಿಂಗ (170), ಅಮಿತ್ ಮಿಶ್ರ (160), ಪಿಯೂಷ್ ಚಾವ್ಲಾ (156) ಮತ್ತು ಹರ್ಭಜನ್ ಸಿಂಗ್ (150) ವಿಕೆಟ್ ಪಡೆದು ಮೊದಲ ನಾಲ್ಕು ಸ್ತಾನಗಳಲಿದ್ದಾರೆ.
ಡ್ವೇನ್ ಬ್ರಾವೋ ಅವರು ಐಪಿಎಲ್ ನಲ್ಲಿ ಎರಡು ಬಾರಿ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಡ್ವೇನ್ ಬ್ರಾವೋ ಅವರು ಐಪಿಎಲ್ ನಲ್ಲಿ ಒಟ್ಟು 137 ಪಂದ್ಯಗಳನ್ನು ಆಡಿದ್ದು, 1,483 ರನ್ ಗಳಿಸಿದ್ದಾರೆ.
ಐಪಿಎಲ್ 2020 ರ 21 ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟ್ ಆಗಿತ್ತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್ ಗಳಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ವಿರುದ್ಧ 10 ರನ್‌ಗಳಿಂದ ಸೋಲು ಕಂಡಿತು. ಈ ಪಂದ್ಯದಲ್ಲಿ ಡ್ವೇನ್ ಬ್ರಾವೋ ಅವರು 3 ವಿಕೆಟ್ ಪಡೆದಿದ್ದರು.
ಡ್ವೇನ್ ಬ್ರಾವೊ ಅವರು ಈ ಹಿಂದೆ ಎಲ್ಲಾ ಟಿ-20 ಕ್ರಿಕೆಟ್ ಮಾದರಿಯಲ್ಲಿ ಒಟ್ಟು 500 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಇದನ್ನು ಓದಿ: ತ್ರಿಪಾಠಿ ಏಕಾಂಗಿ ಹೋರಾಟ; ಚೆನ್ನೈ ವಿರುದ್ಧ ಕೊಲ್ಕತ್ತಾಗೆ 10 ರನ್ ಗಳ ರೋಚಕ ಗೆಲುವು
Milestone Alert!@DJBravo47 now has 150 wickets in the IPL. He is the 5th bowler in IPL to achieve this feat.#Dream11IPL pic.twitter.com/VIB7L241xA
— IndianPremierLeague (@IPL) October 7, 2020