ಸ್ನೇಹಿತನ ಮನೆಗೆ ಊಟಕ್ಕೆ ತೆರಳಿದ್ದ 33 ವರ್ಷದ ಮಹಿಳಾ ಅಧಿಕಾರಿ ನೇಣಿಗೆ ಶರಣು !

ಬೆಂಗಳೂರು: ಇಲ್ಲಿನ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್?ನಲ್ಲಿ ಸಿಡಿಐನ ಡಿಎಸ್‌ಪಿ ಲಕ್ಷ್ಮಿ (೩೩) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೨೦೧೪ರ ಕೆಎಸ್, ಪಿಎಸ್ ಬ್ಯಾಚ್ ನಲ್ಲಿ ಲಕ್ಷ್ಮಿ ಅಧಿಕಾರಿ ಆಗಿದ್ದವರು. ೨೦೧೭ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.…

depression DSP hang Police suicide

ಬೆಂಗಳೂರು: ಇಲ್ಲಿನ ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್?ನಲ್ಲಿ ಸಿಡಿಐನ ಡಿಎಸ್‌ಪಿ ಲಕ್ಷ್ಮಿ (೩೩) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

೨೦೧೪ರ ಕೆಎಸ್, ಪಿಎಸ್ ಬ್ಯಾಚ್ ನಲ್ಲಿ ಲಕ್ಷ್ಮಿ ಅಧಿಕಾರಿ ಆಗಿದ್ದವರು. ೨೦೧೭ರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆಪ್ತ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿದ್ದು, ಅನ್ನಪೂರ್ಣೇಶ್ವರಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣವಾಯಿತೇ?

ಸಿಡಿಐನ ಡಿಎಸ್‌ಪಿ ಲಕ್ಷ್ಮಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇವರ ಪತಿ ಹೊರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಎಂಟು ವರ್ಷ ಕಳೆದರೂ ಮಕ್ಕಳು ಆಗಿರಲಿಲ್ಲ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

Vijayaprabha Mobile App free

ಸ್ನೇಹಿತನ ಮನೆಯಲ್ಲಿ ನೇಣಿಗೆ !

ಡಿಎಸ್‌ಪಿ ಲಕ್ಷ್ಮಿ ಅವರು ಅನ್ನಪೂರ್ಣೇಶ್ವರಿ ನಗರದ ತನ್ನ ಆಪ್ತ ಸ್ನೇಹಿತ ಮನು ಎಂಬಾತನ ಮನೆಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಪಾರ್ಟಿಯಲ್ಲಿಮದ್ಯ ಸೇವಿದ್ದರು ಎಂದು ಹೇಳಲಾಗಿದೆ. ರಾತ್ರಿ ೧೦ ಗಂಟೆ ವೇಳೆಗೆ ನೇಣು ಹಾಕಿಕೊಂಡಿದ್ದಾರೆ. ನಂತರ ಅವರನ್ನು ಕರೆದೊಯ್ದಿದ್ದು ಲಕ್ಷ್ಮಿ ಅವರು ಮೃತಪಟ್ಟಿದ್ದಾರೆ ವೈದ್ಯರು ತಿಳಿಸಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.