ಬರಪೀಡಿತ ಪ್ರದೇಶಗಳ ಘೋಷಣೆ:
- ಪ್ರತಿ ಬೆಳೆಗೆ ಘೋಷಿಸಿರುವ ಪರಿಹಾರದ ಮೊತ್ತ ಎಷ್ಟು?
- ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ನಿಮ್ಮ ತಾಲೂಕು ಇದೆಯೇ?
- ಪರಿಹಾರ ನೀಡಲು ಯಾವ ಕ್ರಮಗಳನ್ನು ಅನುಸರಿಸಲಾಗುತ್ತದೆ?
Drought declaration: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಕಳೆದ 10 ವರ್ಷಗಳ ಬಳಿಕ ತೀವ್ರ ಬರ ಎದುರಾಗಿದ್ದು ರಾಜ್ಯಾದ್ಯಂತ ಒಟ್ಟು 195 ತಾಲೂಕುಗಳಲ್ಲಿ ಬರ ಆವರಿಸಿದ್ದು, ಈ ಪ್ರದೇಶಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವ ಮೂಲಕ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಂದರೆ 161 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಅತ್ಯಂತ ತೀವ್ರವಾಗಿದ್ದರೆ, 34 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಸಾಧಾರಣವಾಗಿ ತಿಳಿಸಿದೆ.
ಇದನ್ನೂ ಓದಿ: ಇನ್ಮುಂದೆ ಆಧಾರ್, ಡ್ರೈವಿಂಗ್, ವಿವಾಹ ನೋಂದಣಿ ಎಲ್ಲದಕ್ಕೂ ಒಂದೇ ಕಡ್ಡಾಯ ದಾಖಲೆ
ರಾಜ್ಯದ ಒಟ್ಟು 195 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಗೊತ್ತುಪಡಿಸುವಂತೆ ಸಲಹೆ ನೀಡಿದ ಸಚಿವ ಸಂಪುಟದ ಉಪ ಸಮಿತಿಯು ಮುಖ್ಯಮಂತ್ರಿಗೆ ಶಿಫಾರಸು ಮಾಡಿತ್ತು. ಪರಿಣಾಮವಾಗಿ, ಸರ್ಕಾರವು ಈ ಶಿಫಾರಸಿಗೆ ಮಣಿದು ಈ ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ.
Drought declaration: ಪ್ರತಿ ಬೆಳೆಗೆ ಘೋಷಿಸಿರುವ ಪರಿಹಾರದ ಮೊತ್ತ ಎಷ್ಟು?
- ಮಳೆಯಾಶ್ರಿತ ಪ್ರದೇಶದಲ್ಲಿ ಶೇಕಡಾ 33ಕ್ಕಿಂತ ಹೆಚ್ಚು ಬೆಳೆ ಹಾನಿಯಾದರೆ ಪ್ರತಿ ಹೆಕ್ಟೇರ್‌ಗೆ 8500 ರೂ.ಗಳ ಪರಿಹಾರ ನೀಡಲಾಗುವುದು. ಇನ್ನೊಂದೆಡೆ ಕನಿಷ್ಠ ಹಾನಿಯಾಗಿದ್ದರೆ ಪ್ರತಿ ಹೆಕ್ಟೇರ್‌ಗೆ 1000 ರೂಪಾಯಿ ಪರಿಹಾರ ನೀಡಲಾಗುವುದು.
- ನೀರಾವರಿ ಪ್ರದೇಶದ ರೈತರು ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ 17 ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು ಮತ್ತು ಕನಿಷ್ಠ ಮೊತ್ತ 2 ಸಾವಿರ ರೂ ನೀಡಲಾಗುವುದು.
- ತೆಂಗು, ಬಾಳೆ, ಟೊಮೇಟೊ, ಆಲೂಗೆಡ್ಡೆ ಮುಂತಾದ ಬೆಳೆ ಹಾನಿಗೆ ಕನಿಷ್ಠ 2500 ರೂ., ಹೆಕ್ಟೇರ್‌ಗೆ 22500 ರೂ. ಪರಿಹಾರವನ್ನು ನೀಡಲಾಗುವುದು
- ರೇಷ್ಮೆಗೆ ಸಂಬಂಧಿಸಿದಂತೆ, ಐರಿ, ಮಲಬಾರಿ ಮತ್ತು ಟಸ್ಸಾರ್ ರೇಷ್ಮೆಗೆ ಯಾವುದೇ ಹಾನಿ ಉಂಟಾದರೆ ಪ್ರತಿ ಹೆಕ್ಟೇರ್‌ಗೆ 6 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ.
- ಜಾನುವಾರು ಕೇಂದ್ರಗಳಲ್ಲಿನ ದೊಡ್ಡ ಜಾನುವಾರುಗಳಿಗೆ ನೀರು, ಮೇವು ಮತ್ತು ಇತರ ಅಗತ್ಯತೆಗಳ ಪೂರೈಕೆಗಾಗಿ ದಿನಕ್ಕೆ 80 ರೂಪಾಯಿ ಮತ್ತು ಸಣ್ಣ ಜಾನುವಾರುಗಳಿಗೆ 45 ರೂಪಾಯಿಗಳನ್ನು ಪರಿಹಾರವನ್ನು ನೀಡಲಾಗುತ್ತದೆ.
- ಕೇಂದ್ರ ತಂಡ ಶಿಫಾರಸು ಮೇರೆಗೆ ನಿಗದಿತ ಪ್ರದೇಶಗಳಿಗೆ ಮೇವು ಸಾಗಣೆ ವೆಚ್ಚವನ್ನು ಸರಕಾರ ಭರಿಸಲಿದೆ.
ಇದನ್ನೂ ಓದಿ: ಇಂದಿನ ಹವಾಮಾನ ವರದಿ, ಮುಂದಿನ 24 ಗಂಟೆ ಭಾರೀ ಮಳೆ
ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ನಿಮ್ಮ ತಾಲೂಕು ಇದೆಯೇ? ಈ ರೀತಿ ಪರಿಶೀಲಿಸಿ.
ರಾಜ್ಯ ಸರ್ಕಾರವು ಘೋಷಿಸಿರುವ ಬರ ಪೀಡಿತ ಪ್ರದೇಶಗಳಲ್ಲಿ ನಿಮ್ಮ ತಾಲ್ಲೂಕನ್ನು ಸೇರಿಸಲಾಗಿದೆಯೇ ಎಂಬುದನ್ನು ನಿರ್ಧರಿಸಲು, ನೀವು ಒದಗಿಸಿದ ಲಿಂಕ್ ಅನ್ನು ಪ್ರವೇಶಿಸಬಹುದು. ನಿರ್ದಿಷ್ಟಪಡಿಸಿದ file:///C:/Users/User%201/Downloads/%E0%B2%AC%E0%B2%B0%E0%B2%97%E0%B2%BE%E0%B2%B2%20%E0%B2%98%E0%B3%86%E0%B3%82%E0%B3%95%E0%B2%B7%E0%B2%A3%E0%B3%86.pdf PDF ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಬರ ಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಪಟ್ಟಿಯನ್ನು ನೀವು ಕಾಣಬಹುದು. ನಿಮ್ಮ ತಾಲೂಕು ಪಟ್ಟಿಯಲ್ಲಿದ್ದರೆ ಬೆಳೆ ಹಾನಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಭಾದ್ರಪದ ಮಾಸದ ಮೊದಲ ದಿನದಂದು ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಅನುಗ್ರಹ..!
ಪರಿಹಾರ ನೀಡಲು ಯಾವ ಕ್ರಮಗಳನ್ನು ಅನುಸರಿಸಲಾಗುತ್ತದೆ?
ಬರಪೀಡಿತ ತಾಲ್ಲೂಕುಗಳನ್ನು ಗುರುತಿಸಿದ ನಂತರ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪಟ್ಟಿಯನ್ನು ಕಳುಹಿಸುತ್ತದೆ. ನಂತರ ಕೇಂದ್ರ ಸರ್ಕಾರದ ತಜ್ಞರ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಲಿದೆ. ತಜ್ಞರ ತಂಡದಿಂದ ವರದಿ ಬಂದ ನಂತರ ಕೇಂದ್ರ ಸರ್ಕಾರ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹಾನಿಗೊಳಗಾದ ಪ್ರದೇಶದ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲಿದೆ.
ಗಮನಿಸಿ: ಬರಪೀಡಿತ ಪ್ರದೇಶಗಳಲ್ಲದ ರೈತರು ತಮ್ಮ ಬೆಳೆ ಹಾನಿಗೊಳಗಾದರೂ ಬೆಳೆ ಹಾನಿಗೆ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ. ಬರಪೀಡಿತ ತಾಲೂಕುಗಳ ರೈತರಿಗೆ ಮಾತ್ರ ಪರಿಹಾರ ನೀಡಲಾಗುವುದು.
ಇದನ್ನೂ ಓದಿ: ಪಾಕ್ ಗೆ ಶಾಕ್, ಕೊನೆಯ ಎಸತದಲ್ಲಿ ಲಂಕಾಗೆ ರೋಚಕ ಜಯ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |