ರಾಷ್ಟ್ರಪತಿ ಸ್ಥಾನಕ್ಕೆ ಅಚ್ಚರಿ ಅಭ್ಯರ್ಥಿ ಘೋಷಿಸಿದ NDA; ಮೋದಿ ಹೊಗಳಿದ ದಲಿತ ಅಭ್ಯರ್ಥಿಯ ಬಗ್ಗೆ ನಿಮಗೆಷ್ಟು ಗೊತ್ತು..?

ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ NDA ಮೈತ್ರಿಕೂಟವು ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿದ್ದು, ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಆಡಳಿತ ಪಕ್ಷಗಳ ವತಿಯಿಂದ ದ್ರೌಪದಿ ಮುರ್ಮು ಅವರನ್ನು ನಮ್ಮ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.…

ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ನೇತೃತ್ವದ NDA ಮೈತ್ರಿಕೂಟವು ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿದ್ದು, ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಆಡಳಿತ ಪಕ್ಷಗಳ ವತಿಯಿಂದ ದ್ರೌಪದಿ ಮುರ್ಮು ಅವರನ್ನು ನಮ್ಮ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.

ಯಾರು ಈ ದ್ರೌಪದಿ ಮುರ್ಮು..?

ಜಾರ್ಖಂಡ್ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು NDA ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

Vijayaprabha Mobile App free

ಇವರು ಒಡಿಶಾದ ಮಯೂರ್ಬಂಜ್ ಮೂಲದವರಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದರು. ಈ ಪೈಕಿ ಇಬ್ಬರು ಗಂಡು ಮಕ್ಕಳು ತೀರಿಕೊಂಡಿದ್ದು, ಓರ್ವ ಮಗಳಿದ್ದಾಳೆ. ಇವರ ಪತಿ ಶ್ಯಾಮ್ ಚರಣ್ ಮುರ್ಮು ಕೂಡ ಅಸ್ತಂಗತರಾಗಿದ್ದಾರೆ. 2000–2009ರವರೆಗೆ ಶಾಸಕಿಯಾಗಿ, 2000 ಮಾ.6ರಿಂದ 2004ರ ಮೇ16ರವರೆಗೆ ಒಡಿಶಾ ಸರ್ಕಾರದಲ್ಲಿ ಸಚಿವರಾಗಿದ್ದರು.

ಒಡಿಶಾದಲ್ಲಿ ಬಿಜೆಪಿ & ಬಿಜು ಜನತಾದಳದ ಮೈತ್ರಿ ಸರ್ಕಾರದಲ್ಲಿ ದ್ರೌಪದಿ ಮುರ್ಮು ಅವರು 2000ದ ಮಾ.6ರಿಂದ 2002ರ ಆ.6ರವರೆಗೆ ವಾಣಿಜ್ಯ & ಸಾರಿಗೆ ಸಚಿವರಾಗಿದ್ದರು. ತರುವಾಯ , 2002ರ ಆ.6ರಿಂದ 2004ರ ಮೇ 16ರವರೆಗೆ ಪಶುಸಂಗೋಪನಾ ಮಂತ್ರಿಯಾಗಿದ್ದರು.

ಇವರು ರಾಯ್ ರಂಗಪುರ್ ಕ್ಷೇತ್ರದಿಂದ 2000 & 2004ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಜೊತೆಗೆ ಜಾರ್ಖಂಡ್ ರಾಜ್ಯದ ಮೊದಲ ರಾಜ್ಯಪಾಲೆ ಹಾಗೂ ರಾಜ್ಯಪಾಲ ಹುದ್ದೆಯನ್ನು 5 ವರ್ಷ ಪೂರೈಸಿದ ಮೊದಲಿಗರು ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

‘ಮುರ್ಮು ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ’

‘ರಾಷ್ಟ್ರಪತಿ ಚುನಾವಣೆಗೆ ಆಯ್ಕೆಯಾಗಿರುವ ಬಿಜೆಪಿ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುರ್ಮು ಅವರಿಗೆ ಟ್ವೀಟ್‌ ಮೂಲಕ ಶುಭಕೋರಿರುವ‌ ಅವರು, ‘ಮುರ್ಮು ಸಮಾಜ ಸೇವೆಗೆ ಮತ್ತು ಬಡವರು, ದೀನದಲಿತರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರು ಶ್ರೀಮಂತ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ’ ಎಂದು ಹೊಗಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.