ವಿಜಯಪುರ : ನಗರದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾವರ್ಧಕ ಸಂಘದ ಕುಮಾರಿ ಮೋನಿಕಾ ಬಸವರಾಜ ಕಣ್ಣಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 17ನೇ ದೀಪದಾನ ಕಾರ್ಯಕ್ರಮವನ್ನು ಸಸಿಗೆ ನೀರು ಉಣಿಸುವುದರ ಮೂಲಕ ಎಸ್ ಎಸ್ ವಿ ವಿ ಸಂಘದ ಉಪಾಧ್ಯಕ್ಷರಾದ ಶ್ರೀ ಶಶಿಕುಮಾರ್ ಕಣ್ಣಿಯವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಾರದಾಮನಿ ಹುನಶಾಳ ರವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಕರು ಪಾಠ ಬೋಧನೆಗಿಂತ ಮುಂಚೆ ತಯಾರಿ ಹೇಗೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಹಾಗೂ ಶಿಕ್ಷಣ ಕ್ಷೇತ್ರದ ವಿವಿಧ ತಜ್ಞರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ವಿಜಯಪುರದ ಪರಮಪೂಜ್ಯ ಶ್ರೀ ನರೇಶಾನಂದ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ರಾಮಚಂದ್ರ ಎನ್ ಮೊರೆಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ನೈಜಜೀವನ ಮತ್ತು ವೃತ್ತಿಜೀವನದಲ್ಲಿ ಮನುಷ್ಯ ಯಶಸ್ವಿಯಾಗಿ ಜೀವನವನ್ನು ಸಾಗಿಸಬೇಕಾದರೆ ಹೊಂದಾಣಿಕೆ ಮತ್ತು ಸಹಕಾರ ಎರಡು ಅಮೂಲ್ಯವಾದ ಅಂಶಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕಛೇರಿಯ ಅಧೀಕ್ಷಕರಾದ ಶ್ರೀ ಎಂ.ಎಸ್.ಶೇಖ, ಪ್ರಾಧ್ಯಾಪಕರಾದ ಮಾರುತಿ ಡಾ.ಜ್ಯೋತಿ ಇರಸೂರ, ರೇಖಾ ಬಾರಕೇರ, ರೇಣುಕಾ ಹಳ್ಳಿ, ಜಿ ಎಸ್ ಸ್ಥಾವರಮಠ ಮಾಲಾಶ್ರೀ ಹಾಗೂ ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿಯರಾದ ಡಾ.ಜ್ಯೋತಿ ಇರಸೂರ ರವರು ವರ್ಷದ ವರದಿವಾಚನ ಮಾಡಿದರು. ಮಹಾಲಕ್ಷ್ಮೀ ರವರು ಅತಿಥಿ ಪರಿಚಯ ಹಾಗೂ ಸ್ವಾಗತಿಸಿದರು ಪ್ರಶಿಕ್ಷಣಾರ್ಥಿಗಳಾದ ಪ್ರಶಾಂತ್ ಕುಂಬಾರ್ ಹಾಗೂ ಐಶ್ವರ್ಯ ಹಿರೇಮಠ್ ನಿರೂಪಿಸಿದರು, ಮೇಘಾ ಪ್ರಾರ್ಥಿಸಿದರು, ಕೀರ್ತಿ ಕುಂಬಾರ ಸ್ವಾಗತಿಸಿದರು, ವಿಧ್ಯಾರ್ಥಿ ಪ್ರತಿನಿಧಿ ಕುಮಾರ ಕೃಷ್ಣ ಮಡ್ಡಿಮನಿ ಕಾರ್ಯಕ್ರಮವನ್ನು ವಂದಿಸಿದರು.